ಬೆಂಗಳೂರು: ನಮ್ಮ ಮೆಟ್ರೋ ಸಿಬ್ಬಂದಿಗಳು ಮತ್ತು ವೈದ್ಯರು ಸೇರಿ ಮೆಟ್ರೋ ಮೂಲಕ ರೋಗಿಯ ಪ್ರಾಣ ಉಳಿಸಿದ್ದಾರೆ. ಗೊರಗುಂಟೆಪಾಳ್ಯದಿಂದ ಮಂತ್ರಿ ಸ್ಕ್ವೇರ್ ವರೆಗೆ ಕೇವಲ 18 ನಿಮಿಷದಲ್ಲಿ ಹೃದ್ರೋಗವನ್ನು ಸಾಗಿಸಲಾಗಿದೆ.
8 ಕಿಲೋಮೀಟರ್ ದೂರವಿರುವ ಹಿನ್ನೆಲೆಯಲ್ಲಿ ಹಾಗೂ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿದ್ದರಿಂದ ಮೆಟ್ರೋ ಮೂಲಕ ಹೃದಯವನ್ನು ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಎರಡು ಬಾರಿ ಹೃದಯ ಸಾಗಣೆ ಮಾಡಿದ್ದ ವೈದ್ಯರು, ಈ ಮೂಲಕ ಮೂರನೇ ಯಶಸ್ವಿ ಹೃದಯ ಸಾಗಣೆ ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.



















