ಬೆಂಗಳೂರು: ಈಗಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಆ್ಯಪ್ ಗಳ ಮೂಲಕ ಕೆಲವೇ ನಿಮಿಷಗಳಲ್ಲಿ ವೈಯಕ್ತಿಕ ಸಾಲ ಪಡೆಯುವುದು (Instant loan) ತುಂಬ ಸುಲಭವಾಗಿದೆ. ಸಣ್ಣಪುಟ್ಟ ತುರ್ತು ಅವಶ್ಯಕತೆಗಳಿಗಾಗಿ ಜನರು ಈಗ ಸಾಂಪ್ರದಾಯಿಕ ಬ್ಯಾಂಕುಗಳ ಬದಲು ಇನ್ ಸ್ಟಂಟ್ ಲೋನ್ ಆ್ಯಪ್ ಗಳ ಮೂಲಕ ಸಾಲ ಪಡೆಯುತ್ತಿದ್ದಾರೆ. ಆದರೆ, ಆತುರದಲ್ಲಿ ಸಾಲ ಪಡೆದ ಬಳಿಕ ಅಧಿಕ ಬಡ್ಡಿ ಮತ್ತು ಶುಲ್ಕಗಳಿಂದಾಗಿ ಪರಿತಪಿಸುವ ಜನರ ಸಂಖ್ಯೆರ ಹೆಚ್ಚಾಗಿದೆ.
ಯಾವುದೇ ಲೋನ್ ಆ್ಯಪ್ ನಲ್ಲಿ ಸಾಲಕ್ಕಾಗಿ ‘ಅಪ್ಲೈ’ ಆಪ್ಶನ್ ಮೇಲೆ ಕ್ಲಿಕ್ ಮಾಡುವ ಮುನ್ನ ಗ್ರಾಹಕರು ಕೆಲವು ಪ್ರಮುಖ ವಿಷಯಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಮೊದಲಿಗೆ, ಆ್ಯಪ್ ಹಿಂದಿರುವ ಕಂಪನಿಯು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಅಧಿಕೃತ ನೋಂದಾಯಿತ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಯ (NBFC) ಜತೆ ಪಾಲುದಾರಿಕೆ ಹೊಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅನೇಕ ನಕಲಿ ಆ್ಯಪ್ ಗಳು ಸುಲಭವಾಗಿ ಸಾಲ ನೀಡುವುದಾಗಿ ನಂಬಿಸಿ, ಹೆಚ್ಚಿನ ಬಡ್ಡಿದರಗಳು ಮತ್ತು ಗುಪ್ತ ಶುಲ್ಕಗಳನ್ನು ವಿಧಿಸುತ್ತವೆ.
ಎರಡನೆಯದಾಗಿ, ಸಾಲದ ವಾರ್ಷಿಕ ಶೇಕಡಾ ದರ (ಎಪಿಆರ್), ಸಂಸ್ಕರಣಾ ಶುಲ್ಕ (ಪ್ರೊಸೆಸಿಂಗ್ ಫೀಸ್) ಮತ್ತು ಮುಂಚಿತವಾಗಿ ಮರುಪಾವತಿಸಿದರೆ ವಿಧಿಸುವ ದಂಡದ ವಿವರಗಳನ್ನು ಸ್ಪಷ್ಟವಾಗಿ ಓದಿಕೊಳ್ಳಬೇಕು. ಸಾಲದ ಮೊತ್ತ ಸಣ್ಣದಿರಬಹುದು, ಆದರೆ ಅದರ ಮೇಲಿನ ಒಟ್ಟು ವೆಚ್ಚವು ನಿಮ್ಮ ಜೇಬಿಗೆ ಹೊರೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಅಲ್ಲದೆ, ನಿಮ್ಮ ಮೊಬೈಲ್ ನಲ್ಲಿರುವ ಪರ್ಸನಲ್ ಫೋಟೋಗಳು, ಕಾಂಟ್ಯಾಕ್ಟ್ ಲಿಸ್ಟ್ ಮತ್ತು ಬೇರೆ ಡೇಟಾಗಳಿಗೆ ಆ್ಯಪ್ ಗಳು ಅನಗತ್ಯಅನುಮತಿಗಳನ್ನು ಕೇಳಿದರೆ ಎಚ್ಚರದಿಂದಿರಿ. ವಂಚನೆಗಳಿಂದ ದೂರವಿರಲು ಅಧಿಕೃತ ಮತ್ತು ವಿಶ್ವಾಸಾರ್ಹ ಹಣಕಾಸು ಆ್ಯಪ್ಗಳನ್ನುಮಾತ್ರಬಳಸುವುದುಸುರಕ್ಷಿತವಾಗಿದೆ. ದೇಶದ ಜನರ ಒಟ್ಟು ವೈಯಕ್ತಿಕ ಸಾಲದಲ್ಲಿ ಶೇ.70-77ರಷ್ಟು ಸಾಲವನ್ನು ಇಂತಹ ಆ್ಯಪ್ ಗಳೇ ನೀಡಿರುವ ಕುರಿತು ವರದಿಗಳು ಲಭ್ಯವಾಗಿವೆ. ಹಾಗಾಗಿ, ಆ್ಯಪ್ ಸಾಲಗಳ ಬಗ್ಗೆ ಎಚ್ಚರದಿಂದ ಇರುವುದು ಅತ್ಯವಶ್ಯಕ.
ಇದನ್ನೂ ಓದಿ:ಕೇಂದ್ರೀಯ ರೇಷ್ಮೆ ಮಂಡಳಿಯಲ್ಲಿ 3 ಹುದ್ದೆಗಳ ನೇಮಕಾತಿ : ಎಂಎಸ್ಸಿ ಮುಗಿಸಿದವರಿಗೆ ಅವಕಾಶ!



















