ಬೆಂಗಳೂರು : ದೇಶದಲ್ಲಿ ತುರ್ತು ಹಣಕಾಸಿನ ಅಗತ್ಯಕ್ಕಾಗಿ ಚಿನ್ನದ ಸಾಲ (Gold Loan) ಪಡೆಯುವವರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಆದರೆ ಸರಿಯಾದ ಮಾಹಿತಿಯಿಲ್ಲದೆ ಕುಟುಂಬದ ಒಡವೆಗಳನ್ನು ಗಿರವಿ ಇಡುವುದರಿಂದ ಅವುಗಳನ್ನು ಶಾಶ್ವತವಾಗಿ ಕಳೆದುಕೊಳ್ಳುವ ಅಪಾಯವಿದೆ ಎಂದು ತಜ್ಞರು ಎಚ್ಚರ ನೀಡಿದ್ದಾರೆ. ಹಾಗಾಗಿ, ಚಿನ್ನದ ಅಡಮಾನ ಇರಿಸಿ ಸಾಲ ಪಡೆಯುವ ಮುನ್ನ ಒಂದಷ್ಟು ಅಂಶಗಳನ್ನು ತಿಳಿಯುವುದು ಒಳಿತು.
ಗಮನಿಸಬೇಕಾದ ಮುಖ್ಯ ಅಪಾಯಗಳು
ಬುಲೆಟ್ ಮರುಪಾವತಿಯ ಗೊಂದಲ: ಹಲವು ಸಂಸ್ಥೆಗಳು ಬುಲೆಟ್ ಸಾಲದ ರೂಪದಲ್ಲಿ ಹಣ ನೀಡುತ್ತವೆ. ಇಲ್ಲಿ ಗ್ರಾಹಕರು ಪ್ರತಿ ತಿಂಗಳು ಬಡ್ಡಿ ಮಾತ್ರ ಪಾವತಿಸುತ್ತಾರೆ. ಆದರೆ ಸಾಲದ ಅವಧಿ ಮುಗಿದಾಗ ಸಂಪೂರ್ಣ ಅಸಲನ್ನು ಒಮ್ಮೆಲ್ಲೇ ಕಟ್ಟಬೇಕಾಗುತ್ತದೆ. ಇದನ್ನು ತಿಳಿಯದೆ ಗ್ರಾಹಕರು ತಮ್ಮ ಒಡವೆಗಳನ್ನು ಹರಾಜಿನಲ್ಲಿ ಕಳೆದುಕೊಳ್ಳುತ್ತಿದ್ದಾರೆ.
ಹರಾಜಿನ ಅಪಾಯ: ಸಾಲ ಮರುಪಾವತಿಯಲ್ಲಿ ಸುಸ್ತಿದಾರರಾದರೆ (Default) ಬ್ಯಾಂಕ್ ಅಥವಾ ಸಾಲ ನೀಡುವ ಸಂಸ್ಥೆಗಳು ನ್ಯಾಯಾಲಯದ ಅನುಮತಿಯಿಲ್ಲದೆ ಒಡವೆಯನ್ನು ಹರಾಜು ಹಾಕಬಹುದು. ಆರ್ ಬಿಐ ನಿಯಮದಂತೆ ಚಿನ್ನದ ಮೌಲ್ಯದ ಗರಿಷ್ಠ ಶೇ.75ರಷ್ಟು ಮಾತ್ರ ಸಾಲ ಸಿಗುತ್ತದೆ.
ಆರ್‌ಬಿಐ ನಿಯಮಗಳು ಮತ್ತು ಮುನ್ನೆಚ್ಚರಿಕೆಗಳು
• 30 ದಿನಗಳ ನೋಟಿಸ್: ಒಡವೆ ಹರಾಜು ಮಾಡುವ ಮುನ್ನ ಸಾಲಗಾರರಿಗೆ ಕಡ್ಡಾಯವಾಗಿ 30 ದಿನಗಳ ಮೊದಲು ನೋಟಿಸ್ ನೀಡಬೇಕು.
• ಬಡ್ಡಿದರ ಹೋಲಿಕೆ: ಬ್ಯಾಂಕ್ ಗಳು ಶೇ. 8.5 ರಿಂದ 13 ರಷ್ಟು ಬಡ್ಡಿ ವಿಧಿಸಿದರೆ, ಎನ್ ಬಿಎಫ್ ಸಿಗಳು ಶೇ. 12ರಿಂದ 26ರಷ್ಟು ಬಡ್ಡಿ ವಿಧಿಸುತ್ತವೆ. ಸಾಲ ಪಡೆಯುವ ಮುನ್ನ ಬಡ್ಡಿದರಗಳನ್ನು ಹೋಲಿಸುವುದು ಅಗತ್ಯ.
• ಆಭರಣಗಳ ಶುದ್ಧತೆ ಮತ್ತು ತೂಕದ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು.
• ಸರಿಯಾದ ತಿಳಿವಳಿಕೆಯೊಂದಿಗೆ ಹಾಗೂ ನಿಯಮಿತವಾಗಿ ಅಸಲು ಮತ್ತು ಬಡ್ಡಿಯನ್ನು ಪಾವತಿಸುವ ಮೂಲಕ ಚಿನ್ನದ ಸಾಲವನ್ನು ಸುರಕ್ಷಿತವಾಗಿ ಬಳಸಿಕೊಳ್ಳಬಹುದು.
ಇದನ್ನೂ ಓದಿ : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ 12 ಸಾವಿರ ಹುದ್ದೆಗಳ ನೇಮಕಾತಿ



















