ಬೆಂಗಳೂರು : ‘ಬಿಗ್ ಬಾಸ್ ಕನ್ನಡ-13’ ಆರಂಭಕ್ಕೂ ಮುನ್ನವೇ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದ್ದು, ಇದೀಗ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಮೂಲಕ ಅಭಿಮಾನಿಗಳಿಗೆ ವಿಭಿನ್ನ ಅನುಭವ ನೀಡಲು ಸಜ್ಜಾಗಿದೆ. ಬಿಗ್ ಬಾಸ್ ಮನೆ ಬಾಗಿಲು ತೆರೆಯುವ ಮುನ್ನವೇ Bigg Boss Agnipariksha Experience Zone ಅನ್ನು ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್ ಫ್ಲವರ್ ಶೋನಲ್ಲಿ ಆಯೋಜಿಸಲಾಗಿದೆ.
ಈ ವಿಶೇಷ ಎಕ್ಸ್‌ಪೀರಿಯನ್ಸ್ ಝೋನ್‌ಗೆ ಭೇಟಿ ನೀಡುವವರಿಗೆ ಐಕಾನಿಕ್ Bigg Boss Chair, Selfie Zone ಹಾಗೂ Agnipariksha Challengesಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಬಿಗ್ ಬಾಸ್ ಅಭಿಮಾನಿಗಳು ತಮ್ಮ ನೆಚ್ಚಿನ ಕಾರ್ಯಕ್ರಮದ ಅನುಭವವನ್ನು ನೇರವಾಗಿ ಸವಿಯಲು ಇದು ಉತ್ತಮ ಅವಕಾಶವಾಗಿದೆ.
ಇದರ ಜೊತೆಗೆ Agnipariksha Challengesನಲ್ಲಿ ಭಾಗವಹಿಸಿ, Experience Zoneನಲ್ಲಿ ಸೆಲ್ಫಿ ತೆಗೆದು #BBKAGNIPARIKSHE ಹ್ಯಾಶ್‌ಟ್ಯಾಗ್‌ನೊಂದಿಗೆ ಪೋಸ್ಟ್ ಮಾಡಿ, @ColorsKannada ಪೇಜ್ ಟ್ಯಾಗ್ ಮಾಡಿ ಹಾಗೂ ತಮ್ಮ Instagram ಖಾತೆಯನ್ನು Public ಆಗಿ ಇಡುವ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಅವರೊಂದಿಗೆ Bigg Boss Weekend Episode ಅನ್ನು LIVE ಆಗಿ ವೀಕ್ಷಿಸುವ ಸುವರ್ಣಾವಕಾಶ ದೊರೆಯಲಿದೆ. ಜೊತೆಗೆ ಬಿಗ್ ಬಾಸ್‌ನ ಹಲವು ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವೂ ಇದೆ.
ಸ್ಥಳ : ಲಾಲ್‌ಬಾಗ್ ಬೋಟಾನಿಕಲ್ ಗಾರ್ಡನ್, ಬೆಂಗಳೂರು
ದಿನಾಂಕ : 6 ಆಗಸ್ಟ್ 2026
ಸಮಯ : ಬೆಳಿಗ್ಗೆ 10:30 ರಿಂದ ಆರಂಭ.
ಇದನ್ನೂ ಓದಿ : ನಟಿ ತ್ರಿಷಾ ಬಗ್ಗೆ ವಿವಾದಾತ್ಮಕ ಹೇಳಿಕೆ : ತಮಿಳುನಾಡು ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಬಂಧನ



















