ರಾಜ್ಯದ ಜನತೆಗೆ ದಿನಬಳಕೆಯ ಅಕ್ಕಿ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ದಿನದಿಂದ ದಿನಕ್ಕೆ ದರ ಗಗನಕ್ಕೇರುತ್ತಿರುವುದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಅಡುಗೆ ಮನೆ ಬಜೆಟ್ಗೆ ಭಾರಿ ಹೊರೆಯಾಗಿದೆ.
ಒಂದೊಂದು ಅಕ್ಕಿ ತಳಿಗೂ ವಿಭಿನ್ನ ದರ ಹೆಚ್ಚಳವಾಗಿದ್ದು, ರಾಜಮುಡಿ ಅಕ್ಕಿ ಬೆಲೆ ಕೆ.ಜಿಗೆ ಬರೋಬ್ಬರಿ ₹150 ತಲುಪಿದ್ದರೆ, ಬಾಸ್ಮತಿ ಅಕ್ಕಿ ಬೆಲೆ ₹140ಕ್ಕೆ ಏರಿಕೆಯಾಗಿದೆ. ಇನ್ನು ಜೀರಿಗೆ ಅಕ್ಕಿ ₹115, ಕೋಲಂ ಅಕ್ಕಿ ₹100 ತಲುಪಿದ್ದು, ಸೋನಾ ಮಸೂರಿ ಅಕ್ಕಿ ಬೆಲೆಯೂ ₹100ರ ಸನಿಹದಲ್ಲಿದೆ.
ಈ ರೀತಿ ಪ್ರತಿಯೊಂದು ಅಕ್ಕಿ ದರವೂ ಕೆ.ಜಿಗೆ ₹100ರ ಗಡಿ ದಾಟುತ್ತಿರುವುದರಿಂದ ಗ್ರಾಹಕರು ಅಕ್ಕಿ ಖರೀದಿಗೂ ಮುನ್ನ ನೂರು ಬಾರಿ ಯೋಚಿಸುವಂತಾಗಿದೆ. ಸರ್ಕಾರ ಈ ಬೆಲೆ ಏರಿಕೆಗೆ ಕಡಿವಾಣ ಹಾಕಿ ದರ ಇಳಿಕೆಗೆ ಕ್ರಮ ಕೈಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.


















