ಹಾಸನಕ್ಕೆ ಕ್ಯಾಲಿಫೋರ್ನಿಯಾದ ಸ್ಯಾನೋಜೆಯಲ್ಲಿರುವ ಬಾಲಾಜಿ ಮಠದ ಆನಂದನಾಥ ಸ್ವಾಮೀಜಿ ಬೇಟಿ ನೀಡಿ ಹಾಸನಾಂಬೆ ತಾಯಿಯ ದರ್ಶನ ಪಡೆದಿದ್ದಾರೆ. ಬಾಲಗಂಗಾಧರನಾಥ ಸ್ವಾಮೀಜಿಯಿಂದ ದೀಕ್ಷೆ ಪಡೆದಿದ್ದ ಇವರು, ಹಾಸನಾಂಬೆಯ ದರ್ಶನಕ್ಕಾಗಿಯೇ ಇಲ್ಲಿಗೆ ಆಗಮಿಸಿದ್ದಾರೆ.
ದರ್ಶನದ ಬಳಿಕ ಪ್ರತಿಕ್ರಿಯಿಸಿದ ಸ್ವಾಮೀಜಿ, “ತಾಯಿಯ ದರ್ಶನ ಮಾಡಿದ್ದು ಬಹಳ ಖುಷಿಯಾಯಿತು, ತಾಯಿಯ ದರ್ಶನದ ವಿಚಾರ ದೇಶವಿದೇಶಗಳಲ್ಲಿಯೂ ಸುದ್ದಿಯಾಗಿದೆ” ಎಂದು ತಿಳಿಸಿದ್ದಾರೆ.
















