ಉಡುಪಿ : ಒತ್ತಾಯಪೂರ್ವಕವಾಗಿ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಂಡ ಮಗ, ತಂದೆ-ತಾಯಿಯನ್ನೇ ಮನೆಯಿಂದ ಹೊರಹಾಕಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಡಾನಿಡಿಯೂರು ಗ್ರಾಮದ ಸರಸು ಸುವರ್ಣ (69) ಎಂಬುವವರು ತನ್ನ ಎರಡನೇ ಮಗ ವಿನೋದ್ ಸುವರ್ಣ ಜೊತೆ ವಾಸವಾಗಿದ್ದು, ಮನೆ ಸರಸು ಸುವರ್ಣ ಅವರ ಹೆಸರಿನಲ್ಲಿತ್ತು. ಈ ಮನೆಯನ್ನು ವಿನೋದ ಸುವರ್ಣ ತನ್ನ ಹೆಸರಿಗೆ ಮಾಡಿಕೊಡಿ ಎಂದು ಹೇಳಿದಾಗ,ತಾಯಿ ಮಾಡಿಕೊಡುವುದಿಲ್ಲ ಎಂದು ಹೇಳಿದ್ದರು. ಅದಕ್ಕೆ ತಂದೆ,ತಾಯಿ ಇಬ್ಬರ ಮೇಲೆ ಹಲ್ಲೆ ಮಾಡಿ ಕೊಲ್ಲುವುದಾಗಿ ವಿನೋದ್ ಸುವರ್ಣ ಬೆದರಿಕೆ ಹಾಕಿದ್ದನು.
ನಂತರ ಆರೋಪಿಯು ಹೆತ್ತವರನ್ನು ಒತ್ತಾಯಪೂರ್ವಕವಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆದೊಯ್ದು, ಸರಸು ಸುವರ್ಣ ಅವರ ಹೆಸರಿನಲ್ಲಿದ್ದ 11 ಸೆಂಟ್ಸ್ ಜಾಗ ಮತ್ತು ಮನೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ. ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ನನಗೆ ಅನ್ಯಾಯವಾಗಿದೆ ಎಂದು ತಾಯಿ ಸರಸು ಸುವರ್ಣ ಅವರು ಎಸಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಇದರಿಂದ ಆಕ್ರೋಶಗೊಂಡ ವಿನೋದ್, ತಂದೆ-ತಾಯಿ ಮತ್ತು ಸಹೋದರಿಯನ್ನು ಮನೆಯಿಂದ ಹೊರಗೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಸಿನಿಮಾ ಸ್ಟೈಲ್‌ನಲ್ಲಿ ಬೆನ್ನಟ್ಟಿ ಕುಖ್ಯಾತ ರೌಡಿ, ಖತರ್ನಾಕ್ ಸರಗಳ್ಳನ ಬಂಧಿಸಿದ ಪೊಲೀಸರು!


















