ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಜೂನ್‌ನ ಬಿರುಬಿಸಿಲಲ್ಲಿ ಹೂಡಿ ಧರಿಸಿದ್ದ ಆ ಒಬ್ಬ ಯುವಕ : ಪೊಲೀಸರು ಪುಣೆ ಕೋಟೆ ಕೊಲೆ ರಹಸ್ಯ ಭೇದಿಸಿದ್ದು ಹೇಗೆ?

June 24, 2026
Share on WhatsappShare on FacebookShare on Twitter

ಪುಣೆ: ಮಹಾರಾಷ್ಟ್ರದ ಪುಣೆಯ ಐತಿಹಾಸಿಕ ಲೋಹಗಢ ಕೋಟೆಯಲ್ಲಿ ಜೂನ್ 18ರಂದು ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಕೋಟೆಯಿಂದ ಕೆಳಗ್ಗೆ ತಳ್ಳಿ ಸ್ವತಃ ಭಾವಿ ಪತ್ನಿ ಹಾಗೂ ಆಕೆಯ ಪ್ರಿಯಕರನೇ ಕೊಂದಿರುವ ಪ್ರಕರಣದ ಮತ್ತಷ್ಟು ಅಂಶಗಳು ಬಯಲಾಗುತ್ತಿವೆ. ಕೇತನ್ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರಿಗೆ ಸಿಯಾ ಗೋಯಲ್ ಸುಳ್ಳು ಕಥೆ ಹೇಳಿ ನಂಬಿಸಿದ್ದಳು. ಆದರೆ, ಜೂನ್ ತಿಂಗಳ ಧಗಧಗಿಸುವ ಬಿಸಿಲಿನಲ್ಲಿ ಒಬ್ಬ ವ್ಯಕ್ತಿ ಧರಿಸಿದ್ದ ‘ಹೂಡಿ’ (ಟೋಪಿ ಇರುವಂಥ ಜಾಕೆಟ್) ಹಾಗೂ ಆತ ಬಿಟ್ಟು ಹೋಗಿದ್ದ ಒಂದು ಮೊಬೈಲ್ ಫೋನ್ ಇಡೀ ಕೊಲೆ ರಹಸ್ಯವನ್ನು ಜಗತ್ತಿನ ಮುಂದೆ ಬಯಲು ಮಾಡಿದೆ.

33 ಡಿಗ್ರಿ ಸೆಲ್ಸಿಯಸ್ ಬಿಸಿಲಲ್ಲಿ ಹೂಡಿ ಧರಿಸಿದ್ದ ಹಂತಕ

ಲೋಹಗಢ ಕೋಟೆಯ ಟಿಕೆಟ್ ಕೌಂಟರ್ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದ ತನಿಖಾಧಿಕಾರಿಗಳಿಗೆ ಒಂದು ವಿಚಿತ್ರ ಸಂಗತಿ ಕಣ್ಣಿಗೆ ಬಿತ್ತು. ಜೂನ್ 18ರಂದು ಅಲ್ಲಿನ ಉಷ್ಣಾಂಶ ಬರೋಬ್ಬರಿ 33 ಡಿಗ್ರಿ ಸೆಲ್ಸಿಯಸ್ ಇತ್ತು. ಅಂತಹ ಸೆಖೆಯ ವಾತಾವರಣದಲ್ಲೂ ಒಬ್ಬ ಯುವಕ ಶಾರ್ಟ್ಸ್ ಹಾಗೂ ತಲೆಗೆ ಹೂಡಿ ಜಾಕೆಟ್ ಧರಿಸಿ, ಅದರ ಮೇಲೆ ಹೆಡ್‌ಸೆಟ್ ಸಿಕ್ಕಿಸಿಕೊಂಡು ಕೇತನ್ ಮತ್ತು ಸಿಯಾ ದಂಪತಿಯನ್ನು ಹಿಂಬಾಲಿಸುತ್ತಿದ್ದ. ಹೂಡಿಯನ್ನು ಮುಖದ ಮುಂದೆ ಎಳೆದುಕೊಂಡಿದ್ದರಿಂದ ಆತನ ಮುಖ ಕಾಣಿಸುತ್ತಿರಲಿಲ್ಲ. ಮತ್ತೊಂದು ದೃಶ್ಯದಲ್ಲಿ ಸಿಯಾ ದಿಢೀರನೆ ಹಿಂದೆ ತಿರುಗಿ ನೋಡಿದಾಗ, ಆ ಹೂಡಿ ಧರಿಸಿದ ಯುವಕ ತಕ್ಷಣವೇ ಕೆಳಗೆ ಕುಳಿತುಕೊಂಡು ಮುಖ ಮುಚ್ಚಿಕೊಳ್ಳಲು ಯತ್ನಿಸಿದ್ದ. ಈ ಅಸಹಜ ನಡವಳಿಕೆಯೇ ಪೊಲೀಸರ ಸಂಶಯಕ್ಕೆ ಮೂಲ ಕಾರಣವಾಯಿತು.

ಅಂಗಡಿಯಲ್ಲೇ ಫೋನ್ ಬಿಟ್ಟು ಹೋಗಿದ್ದ

ಸಿಸಿಟಿವಿ ದೃಶ್ಯದಲ್ಲಿದ್ದ ಯುವಕ ಸಿಯಾಳ ಪ್ರಿಯಕರ ಚೇತನ್ ಚೌಧರಿ ಎಂದು ಪತ್ತೆ ಹಚ್ಚಿದ ಪೊಲೀಸರು ಆತನ ತಾಂತ್ರಿಕ ದಾಖಲೆಗಳನ್ನು ಪರಿಶೀಲಿಸಿದಾಗ ಮತ್ತೊಂದು ಚಾಣಾಕ್ಷ ನಡೆ ಬೆಳಕಿಗೆ ಬಂತು. ಚೇತನ್ ಜೂನ್ 18 ರಂದು ಪೊಲೀಸರು ತನ್ನ ಲೋಕೇಶನ್ ಟ್ರ್ಯಾಕ್ ಮಾಡಬಾರದು ಎಂಬ ಕಾರಣಕ್ಕೆ ತನ್ನ ಮೊಬೈಲ್ ಫೋನ್ ಅನ್ನು ತನ್ನ ಅಂಗಡಿಯಲ್ಲೇ ಬಿಟ್ಟು ಹೋಗಿದ್ದ. ಅಷ್ಟೇ ಅಲ್ಲದೆ, ಬೆಳಗ್ಗೆ 7 ಗಂಟೆಯಿಂದ ಸಂಜೆ 5.40ರವರೆಗೆ ಆ ಫೋನ್‌ನ ಇಂಟರ್ನೆಟ್ ಸಂಪರ್ಕವನ್ನೂ ಕಡಿತಗೊಳಿಸಿದ್ದ. ಆ ದಿನ ಆತನ ಮೊಬೈಲ್‌ಗೆ ಬಂದಿದ್ದ ಕರೆಗಳಿಗೆ ಆತನ ಅಂಗಡಿಯ ಕೆಲಸಗಾರರೇ ಉತ್ತರಿಸಿದ್ದರು. ಆದರೆ ತಾನು ಟ್ರ್ಯಾಕ್ ಆಗಬಾರದೆಂದು ತನ್ನ ಕೆಲಸಗಾರನೊಬ್ಬನ ಫೋನ್ ಅನ್ನು ಆತ ರಹಸ್ಯವಾಗಿ ಕೋಟೆಗೆ ತಂದಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಸಾಬೀತಾಗಿದೆ.

ಮದುವೆ ಮುರಿಯಲು ಇಷ್ಟವಿರಲಿಲ್ಲ, ಅದಕ್ಕೆ ಕೊಲೆ ಮಾಡಿದೆವು!

ಪೊಲೀಸರ ತೀವ್ರ ವಿಚಾರಣೆಯ ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಕೇತನ್‌ನನ್ನು ಬಿಟ್ಟು ಇಬ್ಬರೂ ಓಡಿಹೋಗಬಹುದಿತ್ತಲ್ಲಾ ಎಂದು ಪೊಲೀಸರು ಪ್ರಶ್ನಿಸಿದಾಗ ಚೇತನ್ ಆಘಾತಕಾರಿ ಕಾರಣ ನೀಡಿದ್ದಾನೆ. “ನಿಶ್ಚಿತಾರ್ಥ ಮುರಿದು ಓಡಿಹೋದರೆ ತನ್ನ ಕುಟುಂಬದ ಗೌರವಕ್ಕೆ ಧಕ್ಕೆ ಬರುತ್ತದೆ ಎಂದು ಸಿಯಾ ಭಾವಿಸಿದ್ದಳು. ಮದುವೆ ನಿಲ್ಲಿಸಲು ಆಕೆಗೆ ಇಷ್ಟವಿರಲಿಲ್ಲ, ಹಾಗಾಗಿ ಕೇತನ್‌ನನ್ನು ಜಗತ್ತಿನಿಂದಲೇ ಇಲ್ಲವಾಗಿಸಲು ನಿರ್ಧರಿಸಿದೆವು” ಎಂದು ಆತ ಹೇಳಿಕೆ ನೀಡಿದ್ದಾನೆ. ಇವರಿಬ್ಬರ ಕಾಲ್ ರೆಕಾರ್ಡ್ಸ್ ಪರಿಶೀಲಿಸಿದಾಗ ಕಳೆದ ಕೆಲವು ತಿಂಗಳುಗಳಲ್ಲಿ ಇವರಿಬ್ಬರ ನಡುವೆ ಸಾವಿರಾರು ಕರೆಗಳು ವಿನಿಮಯವಾಗಿರುವುದು ಪತ್ತೆಯಾಗಿದೆ.

ಕೋಟೆಗೆ ಬರಲು ಸಿಯಾಳ ಸತತ ಹಠ

ಕೇತನ್ ಕುಟುಂಬಸ್ಥರ ಹೇಳಿಕೆಯ ಪ್ರಕಾರ, ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ ಮತ್ತು ಮದುವೆಯನ್ನು ಒಂದು ವರ್ಷ ಮುಂದೂಡುವಂತೆ ಆಕೆ ಕೇಳಿಕೊಂಡಿದ್ದಳು. ಆದರೂ ಮದುವೆ ನಿಶ್ಚಿತವಾದ ಕಾರಣ, ಕೇತನ್‌ನನ್ನು ಮುಗಿಸಲು ಆಕೆ ಮೇ 31 ಮತ್ತು ಜೂನ್ 4ರಂದೂ ಲೋಹಗಢ ಕೋಟೆಗೆ ಬರಲು ತೀವ್ರ ಹಠ ಹಿಡಿದಿದ್ದಳು. ಜೂನ್ 14ರಂದು ಆಕೆ ಮೊದಲ ಬಾರಿಗೆ ಆತನನ್ನು ಕಂದಕಕ್ಕೆ ತಳ್ಳಿದಾಗ ಆತ ಪೊದೆ ಹಿಡಿದು ಬದುಕುಳಿದಿದ್ದ. ಆಗ ‘ಹಾವು ಬಂತು’ ಎಂದು ಸುಳ್ಳು ಹೇಳಿ ಆಕೆಯೇ ಆತನನ್ನು ರಕ್ಷಿಸಿದಂತೆ ನಾಟಕವಾಡಿದ್ದಳು. ಆದರೆ ಕೊನೆಗೆ ಜೂನ್ 18ರಂದು ಪ್ರಿಯಕರ ಚೇತನ್ ಜೊತೆಗೂಡಿ ಕೇತನ್‌ನನ್ನು 400 ಅಡಿ ಆಳದ ಪ್ರಪಾತಕ್ಕೆ ತಳ್ಳಿ ಸಿಯಾ ತನ್ನ ಕ್ರೂರ ಸಂಚನ್ನು ಯಶಸ್ವಿಯಾಗಿ ಮುಗಿಸಿದ್ದಳು. ಸದ್ಯ ಇಬ್ಬರೂ ಕಂಬಿ ಎಣಿಸುತ್ತಿದ್ದಾರೆ.

ಇದನ್ನೂ ಓದಿ : ಪ್ರೀತಿಯ ನಾಟಕವಾಡಿ ಕೋಟಿ ಕುಬೇರನನ್ನೇ ಕಂದಕಕ್ಕೆ ತಳ್ಳಿದ ಭಾವಿ ಪತ್ನಿ

Tags: DeathKarnataka News beat
SendShareTweet
Previous Post

ಆರ್‌ಸಿಬಿಯ ಇಂಗ್ಲೆಂಡ್ ಆಟಗಾರ ಜಾಕೋಬ್ ಬೆಥೆಲ್ ಮನಗೆದ್ದ ಆ ಕನ್ನಡದ ನಟಿ ಯಾರು?

Next Post

ಕ್ರಿಕೆಟ್ ಕಿಟ್‌ಗಾಗಿ ತಾಯಿ ಆಭರಣ ಮಾರಿದ್ದರು : ಸಣ್ಣ ಹಳ್ಳಿಯಿಂದ ಟೀಂ ಇಂಡಿಯಾ ತನಕ ಕ್ರಾಂತಿ ಗೌಡ್ ಹೋರಾಟದ ಕಥೆ

Related Posts

ಪ್ರೀತಿಯ ನಾಟಕವಾಡಿ ಕೋಟಿ ಕುಬೇರನನ್ನೇ ಕಂದಕಕ್ಕೆ ತಳ್ಳಿದ ಭಾವಿ ಪತ್ನಿ
ದೇಶ

ಪ್ರೀತಿಯ ನಾಟಕವಾಡಿ ಕೋಟಿ ಕುಬೇರನನ್ನೇ ಕಂದಕಕ್ಕೆ ತಳ್ಳಿದ ಭಾವಿ ಪತ್ನಿ

ಪದ್ಮಶ್ರೀ ಪುರಸ್ಕೃತ ಕಿನ್ನರ ಕಲಾವಿದ ಮೊಗಿಲಯ್ಯ ಕಣ್ಣೀರು: ಸರ್ಕಾರ ನೀಡಿದ ಜಾಗಕ್ಕಾಗಿ ಕೋರ್ಟ್‌ಗೆ ಅಲೆದಾಟ!
ದೇಶ

ಪದ್ಮಶ್ರೀ ಪುರಸ್ಕೃತ ಕಿನ್ನರ ಕಲಾವಿದ ಮೊಗಿಲಯ್ಯ ಕಣ್ಣೀರು: ಸರ್ಕಾರ ನೀಡಿದ ಜಾಗಕ್ಕಾಗಿ ಕೋರ್ಟ್‌ಗೆ ಅಲೆದಾಟ!

ಬಾಹ್ಯಾಕಾಶ ಇತಿಹಾಸದಲ್ಲೇ ಮೊದಲು : ಕ್ರಾಂತಿಕಾರಿ ‘ಸ್ಟಾರ್‌ಫಾಲ್’ ಮರು-ಪ್ರವೇಶ ಕ್ಯಾಪ್ಸುಲ್ ಉಡಾವಣೆಗೆ ಸ್ಪೇಸ್‌ಎಕ್ಸ್ ಸಜ್ಜು!
ದೇಶ

ಬಾಹ್ಯಾಕಾಶ ಇತಿಹಾಸದಲ್ಲೇ ಮೊದಲು : ಕ್ರಾಂತಿಕಾರಿ ‘ಸ್ಟಾರ್‌ಫಾಲ್’ ಮರು-ಪ್ರವೇಶ ಕ್ಯಾಪ್ಸುಲ್ ಉಡಾವಣೆಗೆ ಸ್ಪೇಸ್‌ಎಕ್ಸ್ ಸಜ್ಜು!

ಸಾಲು ಸಾಲು ದುರಂತ, ಆರ್ಥಿಕ ಸಂಕಷ್ಟ, ರಾಜಕಾರಣಿಗಳ ಕಿರುಕುಳ : ದಯಾಮರಣಕ್ಕೆ ಸೂರತ್‌ನ ವೃದ್ಧ ದಂಪತಿ ಅರ್ಜಿ!
ದೇಶ

ಸಾಲು ಸಾಲು ದುರಂತ, ಆರ್ಥಿಕ ಸಂಕಷ್ಟ, ರಾಜಕಾರಣಿಗಳ ಕಿರುಕುಳ : ದಯಾಮರಣಕ್ಕೆ ಸೂರತ್‌ನ ವೃದ್ಧ ದಂಪತಿ ಅರ್ಜಿ!

‘ನೀಟ್‌ನಿಂದ ಅಸಮಾನತೆ ಸೃಷ್ಟಿ, ದ್ವಿಭಾಷಾ ನೀತಿಗೆ ನಾವು ಬದ್ಧ’ : ತಮಿಳುನಾಡು ವಿಧಾನಸಭೆಯಲ್ಲಿ ಸಿಎಂ ವಿಜಯ್ ಗುಡುಗು
ದೇಶ

‘ನೀಟ್‌ನಿಂದ ಅಸಮಾನತೆ ಸೃಷ್ಟಿ, ದ್ವಿಭಾಷಾ ನೀತಿಗೆ ನಾವು ಬದ್ಧ’ : ತಮಿಳುನಾಡು ವಿಧಾನಸಭೆಯಲ್ಲಿ ಸಿಎಂ ವಿಜಯ್ ಗುಡುಗು

ಇರಾನ್ ಮೇಲಿನ ತೈಲ ನಿರ್ಬಂಧ ಸಡಿಲಿಸಿದ ಅಮೆರಿಕ : ಭಾರತಕ್ಕೆ ದಕ್ಕಲಿದೆಯೇ ಬಂಪರ್ ಲಾಭ?
ದೇಶ

ಇರಾನ್ ಮೇಲಿನ ತೈಲ ನಿರ್ಬಂಧ ಸಡಿಲಿಸಿದ ಅಮೆರಿಕ : ಭಾರತಕ್ಕೆ ದಕ್ಕಲಿದೆಯೇ ಬಂಪರ್ ಲಾಭ?

Next Post
ಕ್ರಿಕೆಟ್ ಕಿಟ್‌ಗಾಗಿ ತಾಯಿ ಆಭರಣ ಮಾರಿದ್ದರು : ಸಣ್ಣ ಹಳ್ಳಿಯಿಂದ ಟೀಂ ಇಂಡಿಯಾ ತನಕ ಕ್ರಾಂತಿ ಗೌಡ್ ಹೋರಾಟದ ಕಥೆ

ಕ್ರಿಕೆಟ್ ಕಿಟ್‌ಗಾಗಿ ತಾಯಿ ಆಭರಣ ಮಾರಿದ್ದರು : ಸಣ್ಣ ಹಳ್ಳಿಯಿಂದ ಟೀಂ ಇಂಡಿಯಾ ತನಕ ಕ್ರಾಂತಿ ಗೌಡ್ ಹೋರಾಟದ ಕಥೆ

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

2027ರ ಏಕದಿನ ವಿಶ್ವಕಪ್‌ಗೆ ವಿರಾಟ್-ರೋಹಿತ್ ಆಡುವ ಬಗ್ಗೆ ಅನುಮಾನವೇಕೆ? : ಟೀಕಾಕಾರರ ವಿರುದ್ಧ ಗುಡುಗಿದ ಆರ್. ಅಶ್ವಿನ್

2027ರ ಏಕದಿನ ವಿಶ್ವಕಪ್‌ಗೆ ವಿರಾಟ್-ರೋಹಿತ್ ಆಡುವ ಬಗ್ಗೆ ಅನುಮಾನವೇಕೆ? : ಟೀಕಾಕಾರರ ವಿರುದ್ಧ ಗುಡುಗಿದ ಆರ್. ಅಶ್ವಿನ್

ಸತೀಶ್ ಜಾರಕಿಹೊಳಿ ಸಹೋದರಿಯ ಪತಿಗೆ ಇಡಿ ಶಾಕ್

ಸತೀಶ್ ಜಾರಕಿಹೊಳಿ ಸಹೋದರಿಯ ಪತಿಗೆ ಇಡಿ ಶಾಕ್

ಕ್ರಿಕೆಟ್ ಕಿಟ್‌ಗಾಗಿ ತಾಯಿ ಆಭರಣ ಮಾರಿದ್ದರು : ಸಣ್ಣ ಹಳ್ಳಿಯಿಂದ ಟೀಂ ಇಂಡಿಯಾ ತನಕ ಕ್ರಾಂತಿ ಗೌಡ್ ಹೋರಾಟದ ಕಥೆ

ಕ್ರಿಕೆಟ್ ಕಿಟ್‌ಗಾಗಿ ತಾಯಿ ಆಭರಣ ಮಾರಿದ್ದರು : ಸಣ್ಣ ಹಳ್ಳಿಯಿಂದ ಟೀಂ ಇಂಡಿಯಾ ತನಕ ಕ್ರಾಂತಿ ಗೌಡ್ ಹೋರಾಟದ ಕಥೆ

ಜೂನ್‌ನ ಬಿರುಬಿಸಿಲಲ್ಲಿ ಹೂಡಿ ಧರಿಸಿದ್ದ ಆ ಒಬ್ಬ ಯುವಕ : ಪೊಲೀಸರು ಪುಣೆ ಕೋಟೆ ಕೊಲೆ ರಹಸ್ಯ ಭೇದಿಸಿದ್ದು ಹೇಗೆ?

ಜೂನ್‌ನ ಬಿರುಬಿಸಿಲಲ್ಲಿ ಹೂಡಿ ಧರಿಸಿದ್ದ ಆ ಒಬ್ಬ ಯುವಕ : ಪೊಲೀಸರು ಪುಣೆ ಕೋಟೆ ಕೊಲೆ ರಹಸ್ಯ ಭೇದಿಸಿದ್ದು ಹೇಗೆ?

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

2027ರ ಏಕದಿನ ವಿಶ್ವಕಪ್‌ಗೆ ವಿರಾಟ್-ರೋಹಿತ್ ಆಡುವ ಬಗ್ಗೆ ಅನುಮಾನವೇಕೆ? : ಟೀಕಾಕಾರರ ವಿರುದ್ಧ ಗುಡುಗಿದ ಆರ್. ಅಶ್ವಿನ್

2027ರ ಏಕದಿನ ವಿಶ್ವಕಪ್‌ಗೆ ವಿರಾಟ್-ರೋಹಿತ್ ಆಡುವ ಬಗ್ಗೆ ಅನುಮಾನವೇಕೆ? : ಟೀಕಾಕಾರರ ವಿರುದ್ಧ ಗುಡುಗಿದ ಆರ್. ಅಶ್ವಿನ್

ಸತೀಶ್ ಜಾರಕಿಹೊಳಿ ಸಹೋದರಿಯ ಪತಿಗೆ ಇಡಿ ಶಾಕ್

ಸತೀಶ್ ಜಾರಕಿಹೊಳಿ ಸಹೋದರಿಯ ಪತಿಗೆ ಇಡಿ ಶಾಕ್

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat