ಬೆಂಗಳೂರು : ನಗರದ ಹೆಬ್ಬಾಳ ಮುಖ್ಯ ರಸ್ತೆಯಲ್ಲಿ ಬೃಹತ್ ಲಾರಿಯೊಂದು ಪಲ್ಟಿಯಾದ ಘಟನೆ ಇಂದು ಬೆಳಗಿನ ಜಾವ ಸುಮಾರು ಐದು ಗಂಟೆಯ ಸುಮಾರಿಗೆ ಸಂಭವಿಸಿದೆ.
ಅತಿವೇಗದ ಮತ್ತು ಅಜಾಗರೂಕ ಚಾಲನೆಯಿಂದ ಲಾರಿ ರಸ್ತೆ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. AP 02 TE 5889 ನೋಂದಣಿ ಸಂಖ್ಯೆಯ ಈ ಲಾರಿ ಆಂಧ್ರ ಪ್ರದೇಶ ಮೂಲದ್ದಾಗಿದೆ.
ಆಂಧ್ರಪ್ರದೇಶದಿಂದ 30 ಟನ್ ಅಕ್ಕಿಯನ್ನು ಸಾಗಿಸಿಕೊಂಡು ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಲಾರಿ ಪಲ್ಟಿಯಾದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಸದ್ಯ ಈ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಾಹಿತಿ ತಿಳಿದ ತಕ್ಷಣ ಹೆಬ್ಬಾಳ ಸಂಚಾರ ವಿಭಾಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಮದುವೆಯಾದ 3 ತಿಂಗಳಿಗೆ ತವರು ಸೇರಿದ ಪತ್ನಿ – ಅತ್ತೆ, ಮಾವನಿಗೆ ಮಚ್ಚಿನಿಂದ ಹಲ್ಲೆಗೈದ ಅಳಿಯ!



















