ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಹೊರ್ಮುಜ್ ಜಲಸಂಧಿಯ ಸಬ್‌ಸೀ ಕೇಬಲ್‌ಗಳ ಮೇಲೆ ಇರಾನ್ ಕಣ್ಣು : ಜಗತ್ತಿಗೆ ಇಂಟರ್ನೆಟ್ ಸ್ಥಗಿತದ ಆತಂಕ

May 18, 2026
Share on WhatsappShare on FacebookShare on Twitter

ಟೆಹ್ರಾನ್ : ಮಧ್ಯಪ್ರಾಚ್ಯ ಯುದ್ಧದ ವೇಳೆ ಹೊರ್ಮುಜ್ ಜಲಸಂಧಿಯನ್ನು ಮುಚ್ಚುವ ಮೂಲಕ ಜಗತ್ತಿಗೆ ತೈಲ ಮತ್ತು ಇಂಧನದ ಆಘಾತ ನೀಡಿದ್ದ ಇರಾನ್, ಇದೀಗ ಜಾಗತಿಕ ಡಿಜಿಟಲ್ ಲೋಕದ ಮರ್ಮಸ್ಥಾನಕ್ಕೆ ಕೈಹಾಕಲು ಸಜ್ಜಾಗಿದೆ. ಹೊರ್ಮುಜ್ ಜಲಸಂಧಿಯ ಸಮುದ್ರದಾಳದಲ್ಲಿ ಹಾದುಹೋಗಿರುವ ಅಂತಾರಾಷ್ಟ್ರೀಯ ಸಬ್‌ಸೀ (ಜಲಾಂತರ್ಗಾಮಿ) ಇಂಟರ್ನೆಟ್ ಕೇಬಲ್‌ಗಳ ಮೇಲೆ ನಿಯಂತ್ರಣ ಸಾಧಿಸಲು ಟೆಹ್ರಾನ್ ಮುಂದಾಗಿದೆ.

ಈ ಜಲಸಂಧಿಯ ಮೂಲಕ ಹಾದುಹೋಗುವ ಸಬ್‌ಸೀ ಕೇಬಲ್‌ಗಳ ಬಳಕೆಗಾಗಿ ಜಾಗತಿಕ ತಂತ್ರಜ್ಞಾನ ದೈತ್ಯರಾದ ಗೂಗಲ್, ಮೈಕ್ರೋಸಾಫ್ಟ್, ಮೆಟಾ ಮತ್ತು ಅಮೆಜಾನ್‌ನಂತಹ ಕಂಪನಿಗಳಿಗೆ ಭಾರಿ ಪ್ರಮಾಣದ ಪರವಾನಗಿ ಶುಲ್ಕ ವಿಧಿಸಲು ಇರಾನ್ ಸರ್ಕಾರ ಯೋಜಿಸುತ್ತಿದೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಒಂದು ವೇಳೆ ಕಂಪನಿಗಳು ಈ ಶುಲ್ಕ ಪಾವತಿಸಲು ನಿರಾಕರಿಸಿದರೆ ಜಾಗತಿಕ ಇಂಟರ್ನೆಟ್ ಸಂಚಾರಕ್ಕೆ ಅಡ್ಡಿಪಡಿಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಇರಾನ್ ಸೇನೆಯ ವಕ್ತಾರ ಇಬ್ರಾಹಿಂ ಜೊಲ್ಫಾಘರಿ, “ನಾವು ಇಂಟರ್ನೆಟ್ ಕೇಬಲ್‌ಗಳ ಮೇಲೆ ಶುಲ್ಕ ವಿಧಿಸಲಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ಗೆ ನಿಕಟವಾಗಿರುವ ಮಾಧ್ಯಮಗಳ ಪ್ರಕಾರ, ವಿದೇಶಿ ತಂತ್ರಜ್ಞಾನ ಸಂಸ್ಥೆಗಳು ಇರಾನ್ ಕಾನೂನುಗಳಿಗೆ ಬದ್ಧವಾಗಿರಬೇಕು ಮತ್ತು ಈ ಕೇಬಲ್‌ಗಳ ದುರಸ್ತಿ ಹಾಗೂ ನಿರ್ವಹಣೆಯ ಸಂಪೂರ್ಣ ಹಕ್ಕನ್ನು ಇರಾನ್ ಕಂಪನಿಗಳಿಗೇ ವಹಿಸಿಕೊಡಬೇಕಾಗುತ್ತದೆ. ಆದರೆ, ಅಮೆರಿಕದ ದಿಗ್ಬಂಧನಗಳ ಕಾರಣದಿಂದಾಗಿ ಅಮೆರಿಕನ್ ಕಂಪನಿಗಳು ಇರಾನ್‌ಗೆ ಯಾವುದೇ ಹಣ ಪಾವತಿಸುವಂತಿಲ್ಲ. ಹೀಗಾಗಿ ಇರಾನ್ ಈ ನಿಯಮವನ್ನು ಹೇಗೆ ಜಾರಿಗೆ ತರಲಿದೆ ಎಂಬುದು ಸದ್ಯಕ್ಕೆ ಯಕ್ಷಪ್ರಶ್ನೆಯಾಗಿದೆ.

ಭಾರತದ ಮೇಲೇನು ಪರಿಣಾಮ?

ವಿಶ್ವದ ಒಟ್ಟಾರೆ ಇಂಟರ್ನೆಟ್ ಮತ್ತು ದತ್ತಾಂಶ (ಡೇಟಾ) ಸಂಚಾರದ ಬಹುಪಾಲು ಭಾಗ ಇಂತಹ ಸಮುದ್ರದಾಳದ ಕೇಬಲ್‌ಗಳ ಮೂಲಕವೇ ನಡೆಯುತ್ತದೆ. ಇರಾನ್‌ನ ಈ ಹಠಾತ್ ನಿರ್ಧಾರದಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆ, ಮಿಲಿಟರಿ ಸಂವಹನ, ಕೃತಕ ಬುದ್ಧಿಮತ್ತೆ (AI), ಹಣಕಾಸು ಮಾರುಕಟ್ಟೆಗಳು ಮತ್ತು ಅಂತಾರಾಷ್ಟ್ರೀಯ ಹಣ ವರ್ಗಾವಣೆ ಪ್ರಕ್ರಿಯೆಗಳು ಸಂಪೂರ್ಣವಾಗಿ ಸ್ತಬ್ಧಗೊಳ್ಳುವ ಭೀತಿ ಎದುರಾಗಿದೆ.

ಭದ್ರತಾ ಕಾರಣಗಳಿಂದಾಗಿ ಅಂತಾರಾಷ್ಟ್ರೀಯ ಕೇಬಲ್ ಆಪರೇಟರ್‌ಗಳು ಈ ಹಿಂದೆ ಒಮಾನ್ ದೇಶದ ಕಡೆಯಿರುವ ಕಿರಿದಾದ ಜಲಮಾರ್ಗದ ಮೂಲಕ ಕೇಬಲ್‌ಗಳನ್ನು ಅಳವಡಿಸಿದ್ದರು. ಆದಾಗ್ಯೂ, ‘ಫಾಲ್ಕನ್’ ಮತ್ತು ‘ಗಲ್ಫ್ ಬ್ರಿಡ್ಜ್ ಇಂಟರ್ನ್ಯಾಷನಲ್’ ಎಂಬ ಎರಡು ಪ್ರಮುಖ ಕೇಬಲ್‌ಗಳು ಇರಾನ್‌ನ ಪ್ರಾದೇಶಿಕ ಜಲಗಡಿಯಲ್ಲಿ ಹಾದುಹೋಗುತ್ತವೆ ಎಂದು ದೂರಸಂಪರ್ಕ ಸಂಶೋಧನಾ ಸಂಸ್ಥೆ ‘ಟೆಲಿಜಿಯೋಗ್ರಫಿ’ ತಿಳಿಸಿದೆ. ಇರಾನ್ ಏನಾದರೂ ಈ ಕೇಬಲ್‌ಗಳಿಗೆ ಹಾನಿ ಉಂಟುಮಾಡಿದರೆ, ಭಾರತದ ಇಂಟರ್ನೆಟ್ ಟ್ರಾಫಿಕ್‌ನ ಬಹುದೊಡ್ಡ ಭಾಗದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಜೊತೆಗೆ ಸಿಂಗಾಪುರದಂತಹ ಏಷ್ಯಾದ ಪ್ರಮುಖ ಡೇಟಾ ಹಬ್‌ಗಳು ಮತ್ತು ಯುರೋಪ್ ನಡುವಿನ ಸಂಪರ್ಕ ಕಡಿತಗೊಂಡು, ಪೂರ್ವ ಆಫ್ರಿಕಾದ ಹಲವು ದೇಶಗಳಲ್ಲಿ ಇಂಟರ್ನೆಟ್ ಬ್ಲ್ಯಾಕೌಟ್ ಸಂಭವಿಸುವ ಸಾಧ್ಯತೆಯಿದೆ.

ಇರಾನ್ ವಾದವೇನು?

ತಾನು ವಿಧಿಸಲು ಹೊರಟಿರುವ ಶುಲ್ಕವು 1982ರ ವಿಶ್ವಸಂಸ್ಥೆಯ ಸಮುದ್ರ ಕಾನೂನು ಒಪ್ಪಂದಕ್ಕೆ (UNCLOS) ಅನುಗುಣವಾಗಿದೆ ಎಂದು ಇರಾನ್ ಮಾಧ್ಯಮಗಳು ಸಮರ್ಥಿಸಿಕೊಳ್ಳುತ್ತಿವೆ. ಈ ಒಪ್ಪಂದದ 79ನೇ ವಿಧಿಯ ಪ್ರಕಾರ, ಕರಾವಳಿ ರಾಷ್ಟ್ರಗಳು ತಮ್ಮ ಪ್ರಾದೇಶಿಕ ಜಲಗಡಿಯಲ್ಲಿ ಹಾದುಹೋಗುವ ಕೇಬಲ್‌ಗಳು ಅಥವಾ ಪೈಪ್‌ಲೈನ್‌ಗಳಿಗೆ ಷರತ್ತುಗಳನ್ನು ವಿಧಿಸುವ ಹಕ್ಕನ್ನು ಹೊಂದಿರುತ್ತವೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಇರಾನ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಅದನ್ನು ಇಂದಿಗೂ ಅಧಿಕೃತವಾಗಿ ಅಂಗೀಕರಿಸಿಲ್ಲ.

ತನ್ನ ವಾದಕ್ಕೆ ಈಜಿಪ್ಟ್ ದೇಶದ ಉದಾಹರಣೆ ನೀಡಿರುವ ಇರಾನ್, ಸುಯೆಜ್ ಕಾಲುವೆಯ ಮೂಲಕ ಹಾದುಹೋಗುವ ಸಬ್‌ಸೀ ಕೇಬಲ್‌ಗಳಿಗೆ ಈಜಿಪ್ಟ್ ಶುಲ್ಕ ವಸೂಲಿ ಮಾಡುತ್ತಿರುವುದನ್ನು ಎತ್ತಿ ತೋರಿಸಿದೆ. ಆದರೆ ಸುಯೆಜ್ ಕಾಲುವೆಯು ಈಜಿಪ್ಟ್ ಭೂಭಾಗದಲ್ಲಿ ನಿರ್ಮಿಸಲಾದ ಕೃತಕ ಜಲಮಾರ್ಗವಾಗಿದ್ದರೆ, ಹೊರ್ಮುಜ್ ಜಲಸಂಧಿಯು ನೈಸರ್ಗಿಕ ಜಲಮಾರ್ಗವಾಗಿದೆ. ಹಾಗಾಗಿ ಇವೆರಡನ್ನೂ ಹೋಲಿಸಲು ಬರುವುದಿಲ್ಲ ಎಂದು ಜಾಗತಿಕ ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಇರಾನ್ ಸಮುದ್ರದಾಳದಲ್ಲಿ ಕೇಬಲ್ ದುರಸ್ತಿ ಮಾಡುವ ಹಡಗುಗಳ ಮೇಲೆ ದಾಳಿ ನಡೆಸಿದರೆ, ಜಾಗತಿಕ ಡಿಜಿಟಲ್ ಸಂಪರ್ಕ ಕೊಂಡಿ ಸಂಪೂರ್ಣವಾಗಿ ಕಳಚಿಕೊಳ್ಳುವ ಆತಂಕ ಎದುರಾಗಿದೆ.

ಇದನ್ನೂ ಓದಿ : “ಕನ್ಯೆಯ ಮೌನವೇ ಮದುವೆಗೆ ಸಮ್ಮತಿ” : ಅಫ್ಘನ್ ತಾಲಿಬಾನ್ ಸರ್ಕಾರದಿಂದ ಬಾಲ್ಯವಿವಾಹ ಕಾನೂನುಬದ್ಧ!

Tags: Karnataka News beat
SendShareTweet
Previous Post

ಧೋನಿ ಆಟಕ್ಕೆ ಅಶ್ವಿನ್ ಸುಳಿವು : SRH ಎದುರಿನ ಕಾದಾಟಕ್ಕೂ ಮುನ್ನ CSK ಪಾಳಯದಲ್ಲಿ ಸಂಚಲನ!

Next Post

ಧರ್ಮಶಾಲಾದಲ್ಲಿ ‘ಕಿಂಗ್’ ಕೊಹ್ಲಿ ಮಿಂಚಿನ ಫೀಲ್ಡಿಂಗ್ : ವಿರಾಟ್ ಫಿಟ್ನೆಸ್ ಕಂಡು ಬೆರಗಾದ ಕ್ರೀಡಾ ಜಗತ್ತು!

Related Posts

ವೆನೆಜುವೆಲಾ ಭೂಕಂಪ : ವಾರದ ಬಳಿಕ ಅವಶೇಷಗಳಡಿಯಿಂದ ರಕ್ಷಿಸಲ್ಪಟ್ಟ ನಾಯಿಮರಿ ಮಾಡಿದ್ದೇನು ಗೊತ್ತಾ? ವಿಡಿಯೋ ವೈರಲ್!
ವಿದೇಶ

ವೆನೆಜುವೆಲಾ ಭೂಕಂಪ : ವಾರದ ಬಳಿಕ ಅವಶೇಷಗಳಡಿಯಿಂದ ರಕ್ಷಿಸಲ್ಪಟ್ಟ ನಾಯಿಮರಿ ಮಾಡಿದ್ದೇನು ಗೊತ್ತಾ? ವಿಡಿಯೋ ವೈರಲ್!

ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ ಬೆನ್ನಲ್ಲೇ ಅಮೆರಿಕ ಪೌರತ್ವ ತಡೆಯಲು ಟ್ರಂಪ್ ‘ಪ್ಲಾನ್ ಬಿ’!
ವಿದೇಶ

ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ ಬೆನ್ನಲ್ಲೇ ಅಮೆರಿಕ ಪೌರತ್ವ ತಡೆಯಲು ಟ್ರಂಪ್ ‘ಪ್ಲಾನ್ ಬಿ’!

ಪಾಕ್‌ನಲ್ಲಿ 125 ವರ್ಷ ಹಳೆಯ ಗುರುದ್ವಾರ ಧ್ವಂಸ : ಭಾರತ ತೀವ್ರ ಆಕ್ರೋಶ!
ವಿದೇಶ

ಪಾಕ್‌ನಲ್ಲಿ 125 ವರ್ಷ ಹಳೆಯ ಗುರುದ್ವಾರ ಧ್ವಂಸ : ಭಾರತ ತೀವ್ರ ಆಕ್ರೋಶ!

ಢಾಕಾದಲ್ಲಿ ಹಿಂದೂ ಅರ್ಚಕ, ಕಾನೂನು ವಿದ್ಯಾರ್ಥಿಯ ಅಪಹರಣ ; ಸುಲಿಗೆಗಾಗಿ ನಗ್ನಗೊಳಿಸಿ ಚಿತ್ರಹಿಂಸೆ!
ವಿದೇಶ

ಢಾಕಾದಲ್ಲಿ ಹಿಂದೂ ಅರ್ಚಕ, ಕಾನೂನು ವಿದ್ಯಾರ್ಥಿಯ ಅಪಹರಣ ; ಸುಲಿಗೆಗಾಗಿ ನಗ್ನಗೊಳಿಸಿ ಚಿತ್ರಹಿಂಸೆ!

‘ನಮ್ಮ ನೀರಿನ ಪಾಲು ತಡೆದರೆ ಕೈ ಕತ್ತರಿಸುತ್ತೇವೆ’ – ಭಾರತಕ್ಕೆ ಪಾಕಿಸ್ತಾನದ ಉದ್ಧಟತನದ ಬೆದರಿಕೆ!
ವಿದೇಶ

‘ನಮ್ಮ ನೀರಿನ ಪಾಲು ತಡೆದರೆ ಕೈ ಕತ್ತರಿಸುತ್ತೇವೆ’ – ಭಾರತಕ್ಕೆ ಪಾಕಿಸ್ತಾನದ ಉದ್ಧಟತನದ ಬೆದರಿಕೆ!

ಅಫ್ಘಾನ್‌ ಗಡಿಯಲ್ಲಿ ಪಾಕ್‌ ‘ಡಬಲ್-ಟ್ಯಾಪ್’ ವೈಮಾನಿಕ ದಾಳಿ : ಕನಿಷ್ಠ 35 ನಾಗರಿಕರ ದುರ್ಮರಣ
ವಿದೇಶ

ಅಫ್ಘಾನ್‌ ಗಡಿಯಲ್ಲಿ ಪಾಕ್‌ ‘ಡಬಲ್-ಟ್ಯಾಪ್’ ವೈಮಾನಿಕ ದಾಳಿ : ಕನಿಷ್ಠ 35 ನಾಗರಿಕರ ದುರ್ಮರಣ

Next Post
ಧರ್ಮಶಾಲಾದಲ್ಲಿ ‘ಕಿಂಗ್’ ಕೊಹ್ಲಿ ಮಿಂಚಿನ ಫೀಲ್ಡಿಂಗ್ : ವಿರಾಟ್ ಫಿಟ್ನೆಸ್ ಕಂಡು ಬೆರಗಾದ ಕ್ರೀಡಾ ಜಗತ್ತು!

ಧರ್ಮಶಾಲಾದಲ್ಲಿ 'ಕಿಂಗ್' ಕೊಹ್ಲಿ ಮಿಂಚಿನ ಫೀಲ್ಡಿಂಗ್ : ವಿರಾಟ್ ಫಿಟ್ನೆಸ್ ಕಂಡು ಬೆರಗಾದ ಕ್ರೀಡಾ ಜಗತ್ತು!

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಇ-ರಿಕ್ಷಾಗಳನ್ನು ರಿಮೋಟ್ ಮೂಲಕ ಲಾಕ್ ಮಾಡುವ ಚೀನಿ ಆ್ಯಪ್ ‘BAT-BMS’ಗೆ ಕೇಂದ್ರ ಸರ್ಕಾರ ನಿಷೇಧ!

ಇ-ರಿಕ್ಷಾಗಳನ್ನು ರಿಮೋಟ್ ಮೂಲಕ ಲಾಕ್ ಮಾಡುವ ಚೀನಿ ಆ್ಯಪ್ ‘BAT-BMS’ಗೆ ಕೇಂದ್ರ ಸರ್ಕಾರ ನಿಷೇಧ!

ಐಡಿ ಕಾರ್ಡ್ ಇಲ್ಲ, ವ್ಯಾಪಾರಕ್ಕೆ ಜಾಗವೂ ಇಲ್ಲ : ಬೀದಿ ಬದಿ ವ್ಯಾಪಾರಿಗಳ ಬದುಕು ಅತಂತ್ರ!

ಐಡಿ ಕಾರ್ಡ್ ಇಲ್ಲ, ವ್ಯಾಪಾರಕ್ಕೆ ಜಾಗವೂ ಇಲ್ಲ : ಬೀದಿ ಬದಿ ವ್ಯಾಪಾರಿಗಳ ಬದುಕು ಅತಂತ್ರ!

ರಾಜ್ಯ ಹೈಕೋರ್ಟ್‌ನಲ್ಲಿ 21 ಡೇಟಾ ಎಂಟ್ರಿ ಅಸಿಸ್ಟಂಟ್ ಹುದ್ದೆಗಳ ನೇಮಕಾತಿ : 81 ಸಾವಿರ ರೂ. ಸ್ಯಾಲರಿ

ರಾಜ್ಯ ಹೈಕೋರ್ಟ್‌ನಲ್ಲಿ 21 ಡೇಟಾ ಎಂಟ್ರಿ ಅಸಿಸ್ಟಂಟ್ ಹುದ್ದೆಗಳ ನೇಮಕಾತಿ : 81 ಸಾವಿರ ರೂ. ಸ್ಯಾಲರಿ

ಡಿವೈಡರ್‌ಗೆ ಡಿಕ್ಕಿ ಹೊಡೆದ LPG ಟ್ಯಾಂಕರ್ – ಕ್ಷಣದಲ್ಲೇ ಸ್ಫೋಟ ; 5 ಸಾವು, ಭಯಾನಕ ವಿಡಿಯೋ ವೈರಲ್‌!

ಡಿವೈಡರ್‌ಗೆ ಡಿಕ್ಕಿ ಹೊಡೆದ LPG ಟ್ಯಾಂಕರ್ – ಕ್ಷಣದಲ್ಲೇ ಸ್ಫೋಟ ; 5 ಸಾವು, ಭಯಾನಕ ವಿಡಿಯೋ ವೈರಲ್‌!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಇ-ರಿಕ್ಷಾಗಳನ್ನು ರಿಮೋಟ್ ಮೂಲಕ ಲಾಕ್ ಮಾಡುವ ಚೀನಿ ಆ್ಯಪ್ ‘BAT-BMS’ಗೆ ಕೇಂದ್ರ ಸರ್ಕಾರ ನಿಷೇಧ!

ಇ-ರಿಕ್ಷಾಗಳನ್ನು ರಿಮೋಟ್ ಮೂಲಕ ಲಾಕ್ ಮಾಡುವ ಚೀನಿ ಆ್ಯಪ್ ‘BAT-BMS’ಗೆ ಕೇಂದ್ರ ಸರ್ಕಾರ ನಿಷೇಧ!

ಐಡಿ ಕಾರ್ಡ್ ಇಲ್ಲ, ವ್ಯಾಪಾರಕ್ಕೆ ಜಾಗವೂ ಇಲ್ಲ : ಬೀದಿ ಬದಿ ವ್ಯಾಪಾರಿಗಳ ಬದುಕು ಅತಂತ್ರ!

ಐಡಿ ಕಾರ್ಡ್ ಇಲ್ಲ, ವ್ಯಾಪಾರಕ್ಕೆ ಜಾಗವೂ ಇಲ್ಲ : ಬೀದಿ ಬದಿ ವ್ಯಾಪಾರಿಗಳ ಬದುಕು ಅತಂತ್ರ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat