ನೆಲಮಂಗಲ : ನೀನು ದಪ್ಪಗಿದ್ದೀಯ, ನಿಂಗೆ ಮಗು ಆಗಲ್ಲ ಎಂದು ಗಂಡ ನೀಡುತ್ತಿದ್ದ ಕಿರುಕುಳಕ್ಕೆ ಮನನೊಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಶಿವಲೀಲಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಪೋಷಕರ ವಿರೋಧದ ನಡುವೆಯೂ ಲಕ್ಷ್ಮಣ ಎಂಬಾನನ್ನು ಈಕೆ ಪ್ರೀತಿಸಿ ವಿವಾಹವಾಗಿದ್ದರು. 6 ವರ್ಷಗಳ ಹಿಂದೆ ಕಲಬುರಗಿಯಿಂದ ಕಾಟನ್ ಪೇಟೆಗೆ ಕೆಲಸ ಅರಸಿ ಬಂದಿದ್ದ ಶಿವಲೀಲಾಗೆ ಲಕ್ಷ್ಮಣನ ಮೇಲೆ ಪ್ರೀತಿಯಾಗಿತ್ತು. ಇಬ್ಬರೂ ಪ್ರೀತಿಸಿ 4 ವರ್ಷದ ಹಿಂದೆ ಪೋಷಕರ ವಿರೋಧ ಇದ್ದರೂ ಮದುವೆಯಾಗಿದ್ದರು.
ಮದುವೆಯಾದ ಬಳಿಕ, ‘ನಿನಗೆ ಮಕ್ಕಳು ಆಗಲ್ಲ’ ಅಂತ ಲಕ್ಷ್ಮಣ ನಿತ್ಯ ಕುಡಿದು ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇಬ್ಬರ ನಡುವೆ ಸಾಕಷ್ಟು ಬಾರಿ ಜಗಳವಾಗಿದ್ದು, ವರದಕ್ಷಿಣೆ ತರಲು ಪೀಡಿಸುತ್ತಿದ್ದ ಎನ್ನಲಾಗಿದೆ. ಇಬ್ಬರು ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರದಲ್ಲಿ ವಾಸವಾಗಿದ್ದರು.
ಪ್ರೀತಿಸಿದ ಗಂಡನ ಕಿರುಕುಳ ತಾಳಲಾರದೆ ಕಳೆದ ರಾತ್ರಿ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದು, ಗಂಡ ಲಕ್ಷ್ಮಣ ವಿರುದ್ಧ ಶಿವಲೀಲಾ ಪೋಷಕರು ಕಿರುಕುಳ ದೂರು ದಾಖಲಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ : ಮೈಸೂರಲ್ಲಿ ಬೆಚ್ಚಿ ಬೀಳಿಸುವ ಘಟನೆ ; ಪರಪುರುಷನ ಸಂಗ ಮಾಡಿದ ತಾಯಿಗೆ ಚಟ್ಟ ಕಟ್ಟಿದ ಪುತ್ರ!



















