ವಾಷಿಂಗ್ಟನ್ : ವಾಯು ಪ್ರದರ್ಶನದ ವೇಳೆ ಎರಡು EA-18G ಗ್ರೋಲರ್ ಯುದ್ಧ ವಿಮಾನಗಳು ಆಗಸದಲ್ಲೇ ಡಿಕ್ಕಿಯಾಗಿ ಪತನಗೊಂಡಿರುವ ಘಟನೆ ಅಮೆರಿಕದ ಮೌಂಟೇನ್ ಹೋಮ್ ವಾಯುನೆಲೆಯಲ್ಲಿ ಸಂಭವಿಸಿದೆ.
ಈ ಘಟನೆಯು ಭಾನುವಾರ ಮಧ್ಯಾಹ್ನ 12:30 ರ ಸುಮಾರಿಗೆ (ಸ್ಥಳೀಯ ಕಾಲಮಾನ) ಸಂಭವಿಸಿದೆ. ವಿಪರೀತ ಗಾಳಿಯಿಂದ ನಿಯಂತ್ರಣ ತಪ್ಪಿ ಒಂದು ಯುದ್ಧ ವಿಮಾನ ಮತ್ತೊಂದು ಯುದ್ಧ ವಿಮಾನಕ್ಕೆ ಡಿಕ್ಕಿ ಹೊಡಿದಿದೆ. ತಕ್ಷಣವೇ ವಿಮಾನ ಹಾನಿಗೀಡಾಗಿ ಆಕಾಶದಲ್ಲಿ ಬೆಂಕಿ ಉಂಡೆಗಳು ಚಿಮ್ಮಿವೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿದೆ.
ಅಪಘಾತದಲ್ಲಿ ಸಿಲುಕಿರುವ ವಿಮಾನಗಳು F-18 ಹಾರ್ನೆಟ್‌ನ ಸುಧಾರಿತ ಯುದ್ಧ ವಿಮಾನದ ರೂಪಾಂತರ ಮತ್ತು US ನೌಕಾಪಡೆ/ವಾಯುಪಡೆಯು ಬಳಸುವ ಎರಡು EA-18G ಗ್ರೋಲರ್ ಯುದ್ಧ ವಿಮಾನಗಳಾಗಿವೆ ಎನ್ನಲಾಗಿದೆ. 2 ವಿಮಾನಗಳು ಅಮೆರಿಕದ ವಾಯುನೆಲೆಯಿಂದ ಸುಮಾರು 2 ಮೈಲಿಗಳಷ್ಟು ದೂರದಲ್ಲಿ ಅಪಘಾತಕ್ಕೀಡಾಗಿವೆ. ಘಟನೆ ಸಂಭವಿಸುತ್ತಿದ್ದಂತೆ ವಾಯುಪಡೆಯ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಘಟನೆಯನ್ನು ಮೇಲ್ವಿಚಾರಣೆ ನಡೆಸಯುತ್ತಿವೆ. ಜೊತೆಗೆ ವಿಮಾನ ಅಪಘಾತಕ್ಕೆ ನಿಖರ ಕಾರಣವೇನೆಂಬುದನ್ನ ಪತ್ತೆ ಮಾಡುತ್ತಿವೆ.
ಇನ್ನೂ ಫೈಟರ್ ಜೆಟ್‌ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ಆಗಸದಲ್ಲೇ ಹೊತ್ತಿ ಉರಿದರೂ, ಫೈಟರ್ ಪೈಲಟ್ ಸೇರಿ ನಾಲ್ವರು ಸಿಬ್ಬಂದಿ ಪವಾಡ ಸದೃಶ್ಯವಾಗಿ ಬದುಕುಳಿದಿದ್ದಾರೆ. ಸಂಪೂರ್ಣ ಸುರಕ್ಷಿತವಾಗಿಯೂ ಇದ್ದಾರೆ ಎಂದು ಯುಎಸ್ ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಬಳ್ಳಾರಿಯಲ್ಲಿ ಭಾರಿ ಮಳೆ – ಸಿಡಿಲು ಬಡಿದು ಯುವಕ ಸಾವು!



















