ಕಲಬುರಗಿ : ಹೊಂಡದಲ್ಲಿ ಈಜಾಡಲು ಹೋಗಿದ್ದ ಬಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ಹೊರವಲಯದ ಡಿಗ್ಗಿತಾಂಡಾದಲ್ಲಿ ನಡೆದಿದೆ. ಡಿಗ್ಗಿತಾಂಡಾ ನಿವಾಸಿಯಾದ ರಿತೇಶ್ (12) ಮೃತ ಬಾಲಕ
ರೈಲ್ವೆ ಕಾಮಗಾರಿಗಾಗಿ ನಿರ್ಮಿಸಿದ್ದ ಬೃಹತ್ ಹೊಂಡದಲ್ಲಿ ನೀರು ಸಂಗ್ರಹವಾಗಿತ್ತು. ಈ ನೀರಿನಲ್ಲೇ ಅಪಾಯ ಅಡಗಿಕೊಂಡಿತ್ತು. ಸ್ನೇಹಿತರೊಂದಿಗೆ ಈಜಾಡಲು ತೆರಳಿದ್ದ ರಿತೇಶ್, ಆಳವಾದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಬಾಲಕನ ಮೃತದೇಹವನ್ನು ಸ್ಥಳೀಯರು ಹೊರತೆಗೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇನ್ನು ರೈಲ್ವೆ ಕಾಮಗಾರಿಗಾಗಿ ನಿರ್ಮಿಸಲಾಗಿದ್ದ ಹೊಂಡವು ಸುರಕ್ಷತಾ ಕ್ರಮಗಳಿಲ್ಲದೆ ತೆರೆದಿಟ್ಟಿರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ಪಡಿಸಿದ್ದಾರೆ.
ಇದನ್ನೂ ಓದಿ : ಭೂಮಿಯತ್ತ ಧಾವಿಸುತ್ತಿವೆ ನಿಷ್ಕ್ರಿಯ ಉಪಗ್ರಹಗಳು ; ಇಸ್ರೋ ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿ!


















