ಚಿಂತ್ಪುರಿ : ಕಾರೊಂದು ಆಳವಾದ ಕಂದಕಕ್ಕೆ ಉರುಳಿ ಬಿದ್ದಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾದಲ್ಲಿ ನಡೆದಿದ್ದು, ಮಾತಾ ಚಿಂತ್‌ಪೂರ್ಣಿ ದೇವಸ್ಥಾನಕ್ಕೆ ತೀರ್ಥಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಇಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಕಾರು ಕಂದಕಕ್ಕೆ ಬಿದ್ದ ನಂತರ ಬೆಂಕಿ ಹೊತ್ತಿಕೊಂಡಿದೆ. ಕಾರನ್ನು ಅತಿ ವೇಗದಲ್ಲಿ ಚಲಾಯಿಸುತ್ತಿದ್ದಾಗ ಟೈರ್ ಸ್ಫೋಟಗೊಂಡ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ತಿಳಿಸಿದ್ದಾರೆ.
ಭರ್ವೈನ್-ಹೋಶಿಯಾರ್‌ಪುರ್ ರಸ್ತೆಯಲ್ಲಿ ಈ ದುರಂತ ನಡೆದಿದೆ. ಮಾತಾ ಚಿಂತ್‌ಪೂರ್ಣಿ ದೇವಸ್ಥಾನಕ್ಕೆ ತೀರ್ಥಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಕಾರಿನೊಳಗೆ ಇಬ್ಬರು ಇದ್ದರು. ಆ ಕಾರು ಲುಧಿಯಾನದ ನೋಂದಣಿ ಸಂಖ್ಯೆಯ ಪ್ಲೇಟ್ ಅನ್ನು ಹೊಂದಿತ್ತು. ಕಾರು ಆಳವಾದ ಕಂದಕಕ್ಕೆ ಬಿದ್ದ ತಕ್ಷಣ, ಅದು ಬೆಂಕಿಗಾಹುತಿ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಫ್ರೆಶರ್‌ಗಳಿಗೆ ಗುಡ್ ನ್ಯೂಸ್ : ಬೆಂಗಳೂರಿನ DRDO ಸಂಸ್ಥೆಯಲ್ಲಿ 28 ಹುದ್ದೆಗಳ ನೇಮಕಾತಿ!



















