ಕೋಲಾರ: ಇಂದು ಕೋಲಾರ ಜಿಲ್ಲೆಯ ಮಾಲೂರಿಗೆ ಸಚಿವ ಸಂತೋಷ್ ಲಾಡ್ ಭೇಟಿ ಹಿನ್ನಲೆ ಸಮಾವೇಶಕ್ಕೆ ಆಗಮಿಸುವ ಜನರಿಗೆ ಶಾಸಕ ಕೆ.ವೈ.ನಂಜೇಗೌಡ ಭರ್ಜರಿ ಬಿರಿಯಾನಿ ಊಟದ ವ್ಯವಸ್ಥೆ ಮಾಡಿಸಿದ್ದರು.
ಮಾಲೂರು ತಾಲೂಕಿನ ಕೆ.ಜಿ ಹಳ್ಳಿ ಗ್ರಾಮದಲ್ಲಿ ಕಾರ್ಮಿಕ ಇಲಾಖೆಯಿಂದ ನಿರ್ಮಾಣ ಮಾಡಿರುವ 5 ಕೋಟಿ ವೆಚ್ಚದ ಐಟಿಐ ಕಾಲೇಜು ಉದ್ಘಾಟನೆ ಹಾಗೂ ಕಟ್ಟಡ ಕಾರ್ಮಿಕರ ಮಕ್ಕಳ ಹಾಸ್ಟಲ್ ನಿರ್ಮಾಣಕ್ಕೆ ಇಂದು ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಹಿನ್ನೆಲೆ ಸಚಿವ ಸಂತೋಷ್ ಲಾಡ್ ಆಗಮಿಸಿದ್ದು, ಈ ವೇಳೆ ಮಾಲೂರು ಶಾಸಕ ಕೆವೈ ನಂಜೇಗೌಡ ಕಾರ್ಯಕ್ರಮಕ್ಕೆ ಆಗಮಿಸಿದ ಜನರಿಗೆ ಭರ್ಜರಿ ಬಿರಿಯಾನಿ ಊಟದ ವ್ಯವಸ್ಥೆ ಮಾಡಿಸಿದ್ದರು.
ಗ್ಯಾಸ್ ಸಿಲಿಂಡರ್ ಕೊರತೆ ಹಿನ್ನಲೆ ಸೌದೆ ಓಲೆಯಲ್ಲೆ ಚಿಕನ್ ಬಿರಿಯಾನಿ ತಯಾರು ಮಾಡಲಾಗಿದ್ದು, ಸುಮಾರು 6 ಸಾವಿರ ಜನರಿಗೆ ಬಿರಿಯಾನಿ ಊಟದ ವ್ಯವಸ್ಥೆ ಮಾಡಿರುವ ಶಾಸಕ ಕೆವೈ ನಂಜೇಗೌಡ
ಇದನ್ನೂ ಓದಿ: ‘ನಮಗೆ ರಕ್ಷಣೆ ಕೊಡಿ’.. ಮೈಸೂರು ಎಸ್‌ಪಿ ಕಚೇರಿಗೆ ಬಂದ ತುಮಕೂರಿನ ಪ್ರೇಮಿಗಳು



















