ಮೈಸೂರು: ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಂಗನಹಳ್ಳಿ ಮತ್ತು ಸೀಗೇನಹಳ್ಳಿ ಗ್ರಾಮದ ಪ್ರೇಮಿಗಳಿಬ್ಬರು ನಮಗೆ ರಕ್ಷಣೆ ಕೊಡಿ ಎಂದು ಮೈಸೂರಿನ ಎಸ್ಪಿ ಕಚೇರಿಗೆ ಬಂದಿದ್ದಾರೆ.
ಕೃಪಾ ಮತ್ತು ಧರಣೀಶ್ ರಕ್ಷಣೆ ಕೋರಿ ಮೈಸೂರಿಗೆ ಬಂದ ಪ್ರೇಮಿಗಳು. ಈ ಜೋಡಿ ಕಳೆದ ಎರಡೂವರೆ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು, ಹುಡುಗಿ ಮನೆಯವರ ವಿರೋಧ ವ್ಕಯಕ್ತಪಡಿಸಿದ ಹಿನ್ನೆಲೆ, ಕಳೆದ 4 ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಮಹದೇಶ್ವರ ದೇವಸ್ಥಾನದಲ್ಲಿ ಓಡಿ ಹೋಗಿ ಮದುವೆಯಾಗಿದ್ದಾರೆ.
ಕೃಪಾ ಮತ್ತು ಧರಣೀಶ್ ಅಕ್ಕಪಕ್ಕದ ಊರಿನವರಾಗಿದ್ದು, ಒಂದೇ ಜಾತಿಯಾದರೂ ಕೂಡ ಹುಡುಗಿ ತಂದೆ ಶಿವಕುಮಾರ್ ಇವರ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ಇಬ್ಬರು ಓಡಿ ಹೋಗಿ ಮದುವೆಯಾಗಿದ್ದಾರೆ. ಇದೀಗ ಪ್ರೇಮಿಗಳು ನಮಗೆ ಜೀವ ಬೆದರಿಕೆ ಇದೆ ಎಣದು ರಕ್ಷಣೆಗಾಗಿ ಪೊಲೀಸ್ ಮೊರೆ ಹೋಗಿದ್ದಾರೆ.
ಈಗಾಗಲೇ ಕೃಪಾ ತಂದೆ ಬೆಂಗಳೂರಿನ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಹುಡುಗಿ ಮಿಸ್ಸಿಂಗ್ ಎಂದು ದೂರು ನೀಡಿದ್ದರು. ಸದ್ಯ ನಾವೆಲ್ಲೂ ಕಳೆದು ಹೋಗಿಲ್ಲ. ನಾವಿಬ್ಬರು ಪರಸ್ಪರ ಒಪ್ಪಿ ಮದುವೆಯಾಗಿದ್ದೇವೆ. ನನ್ನ ತಂದೆಯಿಂದ ನಮಗೆ ಜೀವ ಭಯವಿದೆ ರಕ್ಷಣೆ ಬೇಕು ಎಂದು ನವಜೋಡಿ ಕೃಪಾ ಮತ್ತು ಧರಣೀಶ್ ಹೇಳುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಭಾರಿ ಅಗ್ನಿ ಅವಘಡ – ಇಡ್ಲಿ ಸ್ಟೀಮರ್ ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗಿಸಿದ ಹೋಟೆಲ್!



















