ರಾಯಚೂರು : ಬಂಗಾಳಿ ನಕಲಿ ವೈದ್ಯನ ಇಂಜೆಕ್ಷನ್‌ಗೆ 9ನೇ ತರಗತಿ ಬಾಲಕಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಅಮೀನಗಡ ಗ್ರಾಮದಲ್ಲಿ ನಡೆದಿದೆ.
ಅಮೀನಗಡ ಗ್ರಾಮದ ಬಿಂದು (15) ಮೃತ ಬಾಲಕಿ. ಬಾಲಕಿಯ ಪೋಷಕರು ಜ್ವರ ಲಕ್ಷಣಗಳಿಂದ ಚಿಕಿತ್ಸೆಗಾಗಿ ಬಾಲಕಿಯನ್ನು ಕರೆದುಕೊಂಡು ಬಂದಿದ್ದು, ಈ ವೇಳೆ ನಕಲಿ ಬಂಗಾಳಿ ವೈದ್ಯ ಇಂಜೆಕ್ಷನ್ ಮಾಡಿದಾಗ ಆಕಸ್ಮಿಕವಾಗಿ ಬಾಲಕಿ ಸಾವಿಗೆ ಒಳಗಾಗಿದ್ದಾರೆ. ಘಟನೆಯ ಸುದ್ದಿ ಹಂಚಿಕೆಯಾದ ತಕ್ಷಣ ನಕಲಿ ವೈದ್ಯ ಪರಾರಿ ಆಗಿದ್ದಾರೆ.
ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಕ್ಲಿನಿಕ್ ತೆರೆದು ಅನಧಿಕೃತವಾಗಿ ಚಿಕಿತ್ಸೆ ನೀಡುತ್ತಿರುವ ಬಂಗಾಳಿಗಳನ್ನು ಗಮನಿಸಿದರೂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಗೋಚರಿಸದೆ ಕುಳಿತಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.
ಮರಣೋತ್ತರ ಪರೀಕ್ಷೆಗಾಗಿ ಬಾಲಕಿ ಮೃತದೇಹವನ್ನು ರಾಯಚೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿಯುತ್ತಿದೆ.
ಇದನ್ನೂ ಓದಿ : ಶಿವಮೊಗ್ಗ : ಕೆರೆಗೆ ಕಾಲುಜಾರಿ ಬಿದ್ದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು


















