ಮಂಗಳೂರು: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದ ಇಂಧನ ಸರಬರಾಜಿನ ಬಗ್ಗೆ ಉಂಟಾದ ಆತಂಕದ ನಡುವೆಯೇ ಅಮೆರಿಕಾದಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಸಾಗಣೆ ಭಾರತಕ್ಕೆ ತಲುಪಿದೆ. ಸಿಂಗಾಪುರ್ ಧ್ವಜದಡಿಯಲ್ಲಿ ಸಾಗುವ ‘ಪೈಕ್ಸಿಸ್ ಪಯನಿಯರ್’ ಹಡಗು ಇಂದು ಬೆಳಗ್ಗೆ ನವ ಮಂಗಳೂರು ಬಂದರಿಗೆ ಆಗಮಿಸಿದೆ.
ಮಂಗಳೂರು ಬಂದರಿಗೆ 16,714 ಮೆಟ್ರಿಕ್ ಟನ್ ಎಲ್‍ಪಿಜಿ ಹೊತ್ತ ಖಾರ್ಗೋ ಹಡಗು ಆಗಮಿಸಿದ್ದು, ಇರಾನ್ ಹಾಗೂ ಇಸ್ರೇಲ್ ಯುದ್ಧ ಶುರುವಾದ ಬಳಿಕ ರಾಜ್ಯಕ್ಕೆ ಆಗಮಿಸಿದ ಮೊದಲ ಹಡಗು ಇದಾಗಿದೆ.
ಅಮೆರಿಕದ ಟೆಕ್ಸಾಸ್‍ನಿಂದ 16,714 ಮೆಟ್ರಿಕ್ ಟನ್ ಎಲ್‍ಪಿಜಿ ಹೊತ್ತ ಪಿಕ್ಸಿಸ್ ಪಯನೀರ್ ಎಂಬ ಹಡಗು ಮಂಗಳೂರಿನ ನವಮಂಗಳೂರು ಬಂದರಿಗೆ ಆಗಮಿಸಿದೆ. ಏಜೀಸ್ ಕಂಪನಿಗೆ ಎಲ್‍ಪಿಜಿಯನ್ನು ಈ ಹಡಗು ತಂದಿದೆ.
ಮಾ.14 ರಂದು ಅಮೇರಿಕದಿಂದ ಪಿಕ್ಸಿಸ್ ಪಯಿನೀರ್ ಕಾರ್ಗೋ ಹಡಗು ಹೊರಟಿತ್ತು. ಇಂದು ಮಂಗಳೂರಿಗೆ ತಲುಪಿದ್ದು, ಇದರಿಂದ ರಾಜ್ಯದಲ್ಲಿ ತಲೆದೂರಿರುವ ಸಿಲಿಂಡರ್ ಅಭಾವ ಪರಿಹಾರ ಆಗುವ ನಿರೀಕ್ಷೆ ಇದೆ.



















