ಮಂಗಳೂರು : ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ವೊಂದು ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದು, 6 ಮಂದಿ ಮೀನುಗಾರರನ್ನು ಇತರ ಬೋಟ್‌ಗಳಲ್ಲಿದ್ದ ಸ್ಥಳೀಯ ಮೀನುಗಾರರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಮಂಗಳೂರಿನ ಹಳೆ ಬಂದರಿನ ಸಮೀಪ ಶನಿವಾರ ಸಂಜೆ ಈ ಘಟನೆ ನಡೆದಿದೆ.
ಮಂಗಳೂರಿನ ಹಳೆ ಬಂದರಿನಿಂದ(ದಕ್ಕೆ) ಆಳಸಮುದ್ರದ ಬದಲು ದಡದ ಸಮೀಪದ ಮೀನುಗಾರಿಕೆಗೆ (ಕರೆ ಫಿಶಿಂಗ್) ತೆರಳುತ್ತಿದ್ದ ‘ಅಯಾನ್’ ಹೆಸರಿನ ಟ್ರಾಲರ್ ಬೋಟ್ ಮುಳುಗಡೆಯಾಗಿದೆ. ಅಳಿವೆಬಾಗಿಲು ದಾಟಿದ ತಕ್ಷಣ ಬಿರುಗಾಳಿ ಹಾಗೂ ಭಾರೀ ಗಾತ್ರದ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಿದೆ.
ಬೋಟ್ ಮುಳುಗಡೆಯಾಗುತ್ತಿದ್ದಂತೆ ಅದರಲ್ಲಿದ್ದ 6 ಮಂದಿ ಸಿಬ್ಬಂದಿ ಪ್ರಾಣಾಪಾಯಕ್ಕೆ ಸಿಲುಕಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸಮೀಪದಲ್ಲಿದ್ದ ಇತರ ಬೋಟ್‌ಗಳ ಮೀನುಗಾರರು ಹಗ್ಗ ಹಾಗೂ ರಕ್ಷಣಾ ಸಾಧನಗಳನ್ನು ಬಳಸಿ, ಮುಳುಗುತ್ತಿದ್ದ ಬೋಟಿನಲ್ಲಿದ್ದ ಎಲ್ಲಾ ಆರೂ ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ತಮ್ಮ ಬೋಟಿಗೆ ಎತ್ತಿಕೊಂಡು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಟ್ರಂಪ್ ಸುಂಕಕ್ಕೆ ಕೆರಳಿದ ಕೆನಡಾ : ‘ಇದು ನಮ್ಮ ಮೇಲಾದ ಆಕ್ರಮಣ.. ಯುದ್ಧಕ್ಕೆ ನಾವು ಸಿದ್ಧ’ ಎಂದ ಪ್ರಧಾನಿ ಕಾರ್ನಿ!



















