ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಪಾಲಿಗೆ ತಲೆನೋವಾಗಿದ್ದ ದಾವಣಗೆರೆ, ಬಾಗಲಕೋಟೆ ಉಪಚುನಾವಣೆಗೆ ಅಭ್ಯರ್ಥಿಗಳ ಘೋಷಣೆ ಆಗಿದೆ. ಇದು ಬಹಳ ಕಠಿಣವಾದಂತಹ ತೀರ್ಮಾನವಾಗಿತ್ತು. ಎರಡು ಸೀಟುಗಳು ಕಾಂಗ್ರೆಸ್ ಪಕ್ಷ ಗೆದ್ದಿದೆ. ಈ ಬಾರಿಯು ನಾವು ಗೆಲ್ಲಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೈಎಲೆಕ್ಷನ್ ಟಿಕೆಟ್ ಘೋಷಣೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ಎರಡು ಕಡೆಯೂ ಕುಟುಂಬದವರು ಟಿಕೇಟ್ ಕೇಳಿದ್ರು. ಆದರೆ ಕಾರ್ಯಕರ್ತರು ಬೇರೆ ಅಭ್ಯರ್ಥಿಗೆ ಕೊಡಬೇಕಂತ ಒತ್ತಾಯ ಮಾಡ್ತಿದ್ರು. ಎಲ್ಲವನ್ನ ಬಹಳ ಎಚ್ಚರಿಕೆಯಿಂದ ಹೈಕಮಾಂಡ್ ತೀರ್ಮಾನ ಮಾಡಿದೆ. ಬಾಗಲಕೋಟೆಯಲ್ಲಿ ಮೇಟಿ ಪುತ್ರ ಅವರಿಗೆ ಕೊಟ್ಟಿದ್ದಾರೆ. ದಾವಣಗೆರೆಯಲ್ಲಿ ಮಲ್ಲಿಕಾರ್ಜುನ ಪುತ್ರ ಅವರಿಗೆ ಟಿಕೆಟ್ ಕೊಡಲಾಗಿದೆ ಎಂದು ತಿಳಿಸಿದ್ದಾರೆ.
ಇದು ಸುಲಭವಾದ ತಿರ್ಮಾನ ಆಗಿರಲಿಲ್ಲಾ. ಆದರೆ ಈಗಾ ಹೈಕಮಾಂಡ್ ತೀರ್ಮಾನ ಅಗಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲಾ ಸೇರಿ ಕೆಲಸ ಮಾಡಬೇಕು, ಅವರಿಬ್ಬರನ್ನ ಗೆಲ್ಲಿಸಬೇಕು. ಅನೇಕ ವಿಷಯಗಳು ಅಲ್ಲಿ ನಡೆಯಬಹುದು. ಆದರೂ ಅಲ್ಲಿ ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸಿಎಂ, ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ಚುನಾವಣೆ ನಡೆಸಿ ಗೆಲ್ಲಿಸಬೇಕು ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ : ಕೊನೆಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಕೈ ಟಿಕೆಟ್ ಕಗ್ಗಂಟು ಶಮನ



















