ಬೆಂಗಳೂರು: ನಗರದ ಸ್ಯಾಂಕಿ ಕೆರೆಯ ಮುಂಭಾಗದಲ್ಲಿರುವ ಟ್ರಯಾಂಗಲ್ ಪಾರ್ಕ್‌ನಲ್ಲಿ ಕರ್ನಾಟಕ ರತ್ನ ದಿ.ಪುನೀತ್ ರಾಜ್‌ಕುಮಾರ್ ಅವರ 800 ಕೆ.ಜಿ ತೂಕದ ಕಂಚಿನ ಪ್ರತಿಮೆಯನ್ನು ಮಲ್ಲೇಶ್ವರದ ಶಾಸಕ ಅಶ್ವಥ್ ನಾರಾಯಣ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅನಾವರಣಗೊಳಿಸಿದ್ದಾರೆ.

ಪುತ್ಥಳಿ ಅನಾವರಣದ ಬಳಿಕ ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್, ಪುನೀತ್ ರಾಜ್‌ಕುಮಾರ್ ಸದಾಶಿವನಗರದಲ್ಲಿ ಹುಟ್ಟಿ ಬೆಳೆದವರಾಗಿದ್ದರಿಂದ ಅವರ ಪ್ರತಿಮೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಹಾಗಾಗಿ ಪುನೀತ್ ಅಭಿಮಾನಿಗಳ ಆಸೆಯಂತೆ ಪ್ರತಿಮೆ ಅನಾವರಣ ಗೊಳಿಸಲಾಗಿದೆ. ಪುತ್ಥಳಿ ಅನಾವರಣ ಮಾಡುವುದಕ್ಕೆ ಜಿಬಿಎ ಪಶ್ಚಿಮ ವಿಭಾಗದ ಅಧಿಕಾರಿಗಳು ಹಾಗೂ ಸರ್ಕಾರದ ಸಹಕಾರದೊಂದಿಗೆ ಪ್ರತಿಮೆ ಅನಾವರಣ ಮಾಡಲಾಗಿದೆ. ಸರ್ಕಾರಕ್ಕೆ ಹಾಗೂ ಜಿಬಿಎ ಪಶ್ಚಿಮ ವಲಯದ ಅಧಿಕಾರಿಗಳಿಗೆ ಧನ್ಯವಾದಗಳು ಹೇಳುತ್ತೇನೆ ಎಂದಿದ್ದಾರೆ.

ನಟ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿ, ಅಶ್ವತ್ ನಾರಾಯಣ್ ಅವರಿಗೆ ಧನ್ಯವಾದಗಳು, ಪ್ರತಿಮೆ ಚೆನ್ನಾಗಿದೆ ಎಂದು ತಿಳಿಸಿದ್ದಾರೆ.



















