ಬೆಂಗಳೂರು | ಪಿಂಕ್ ಲೈನ್ ಮೆಟ್ರೋ ಮಾರ್ಗದಲ್ಲಿ ಸಂಚರಿಸಲಿರುವ ಮೂರನೇ ಡ್ರೈವರ್ಲೆಸ್ ರೈಲಿನ ಸೆಟ್ ಯಶಸ್ವಿಯಾಗಿ ಕೊತ್ತನೂರು ಡಿಪೋವನ್ನು ತಲುಪಿರುವ ಸುದ್ದಿಯ ನಡುವೆ ಬಿಎಂಆರ್ಸಿಎಲ್ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್ನ್ಯೂಸ್ ಕೊಟ್ಟಿದೆ.
ಯೆಲ್ಲೋ ಲೈನ್ ಮೆಟ್ರೋ ಮಾರ್ಗದಲ್ಲಿ ಇಂದಿನಿಂದ 8ನೇ ರೈಲು ಸಂಚಾರ ಮಾಡಲಿದೆ ಎಂದು ಪ್ರಕಟಣೆ ತಿಳಿಸಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು 2026ರ ಫೆಬ್ರವರಿ 27ರಿಂದ ಹಳದಿ ಮಾರ್ಗದಲ್ಲಿ 8ನೇ ರೈಲನ್ನು ಪ್ರಯಾಣಿಕರ ಸೇವೆಗೆ ಒದಗಿಸುತ್ತಿದೆ. ಹೆಚ್ಚುವರಿ ರೈಲು ಸೇರ್ಪಡೆಯೊಂದಿಗೆ, ಸೋಮವಾರದಿಂದ ಶನಿವಾರದವರೆಗೆ ಹಳದಿ ಮಾರ್ಗದಲ್ಲಿ ಪೀಕ್ ಅವಧಿಯ ವೇಳೆಯಲ್ಲಿ 10 ನಿಮಿಷಗಳ ಬದಲಿಗೆ 9 ನಿಮಿಷಗಳ ಅಂತರದಲ್ಲಿ ಹಾಗೂ ನಾನ್-ಪೀಕ್ ಅವಧಿಯಲ್ಲಿ 18 ನಿಮಿಷಗಳ ಬದಲಿಗೆ 14 ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲುಗಳು ಸಂಚರಿಸಲಿವೆ.
ಭಾನುವಾರದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಲ್ಲಾ ದಿನಗಳಲ್ಲಿ ಆರ್.ವಿ. ರಸ್ತೆ ಹಾಗೂ ಬೊಮ್ಮಸಂದ್ರ ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಮೊದಲ ಮತ್ತು ಕೊನೆಯ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಇದನ್ನೂ ಓದಿ : ನಿಜವಾದ ಪ್ರೀತಿ ತೋರಿಸಿ ಕೊಟ್ಟ ವ್ಯಕ್ತಿ ವಿಜಯ್ | ಮದುವೆಯ ಫೋಟೋ ಹಂಚಿಕೊಂಡು ರಶ್ಮಿಕಾ ಭಾವುಕ


















