ಬೆಂಗಳೂರು : ಯಾವುದೇ ಕಾರಣಕ್ಕೂ ಪರಮೇಶ್ವರ್ ಬಗ್ಗೆ ಪ್ರಶ್ನೆ ಮಾಡುವಂತಿಲ್ಲ. ಪಕ್ಷ ನೆಲ ಕಚ್ಚುವ ಸಂದರ್ಭದಲ್ಲಿ 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ. ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಪರಮೇಶ್ವರ್ ಸಿಎಂ ಸ್ಥಾನಕ್ಕೆ ಒಳ್ಳೆಯ ಆಕಾಂಕ್ಷಿ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ದಲಿತ ಸಿಎಂ ಬಗ್ಗೆ ಪರಮೇಶ್ವರ್ ಹೇಳಿಕೆ ವಿಚಾರವಾಗಿ ಇಂದು ವಿಧನಸೌಧದಲ್ಲಿ ಮಾತನಾಡದ ನಾರಾಯಣಸ್ವಾಮಿ, 2013ರಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಪರಮೇಶ್ವರ್ ಬಹಳ ಕಷ್ಟಪಟ್ಟಿದ್ದಾರೆ. ಆಗ ಪರಮೇಶ್ವರ್ ದುರದೃಷ್ಟವಶಾತ್ ಸೋತ್ರು, ಹಾಗಾಗಿ ಸಿಎಂ ಸ್ಥಾನ ಸಿಗಲಿಲ್ಲ. ಇತಿಹಾಸ ತೆಗೆದು ನೋಡಿದರೆ ಇಷ್ಟು ವರ್ಷ ಅಹಿಂದ ವರ್ಗದವರು ಕಾಂಗ್ರೆಸ್ ಬೆಂಬಲಿಸಿದ್ದೇವೆ. ಹಾಗಾಗಿ ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಜಾರಕಿಹೊಳಿ ಇವರಲ್ಲಿ ಯಾರನ್ನೇ ಆಗಲಿ. ಸಮಯ ಬಂದಾಗ ಮುಖ್ಯಮಂತ್ರಿ ಮಾಡಿ ಅಂತಾ ನಾನೂ ಒತ್ತಾಯ ಮಾಡ್ತೇನೆ. ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಮಂತ್ರಿಗಿರಿಗೆ ಹೊಸದಾಗಿ ಆಯ್ಕೆಯಾದ ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಯೆ ನೀಡದ ನಾರಾಯಣಸ್ವಾಮಿ, ಪ್ರಜಾಪ್ರಭುತ್ವದಲ್ಲಿ ಅಂಬೇಡ್ಕರ್ ಸಂವಿಧಾನದ ಪ್ರಕಾರ ಪ್ರತಿ ಪ್ರಜೆಗೂ ಕೇಳುವ ಹಕ್ಕಿದೆ. ಮೊದಲನೇ ಬಾರಿಗೆ ಗೆದ್ದರೂ ಅವರು ಶಾಸಕರೇ ಅಲ್ವಾ? ಅವರಿಗೂ ಆಸೆ ಆಕಾಂಕ್ಷೆಗಳಿರ್ತಾವೆ ಅವರು ಕೇಳೋದ್ರಲ್ಲಿ ತಪ್ಪಿಲ್ಲ. ಎಂಎಲ್‌ಸಿಗಳನ್ನು ಗಳನ್ನ ನಾವೇ ನಾಮಿನೇಷನ್ ಮಾಡಿರ್ತೀವಿ, ಅವರು ಕೇಳೋದರಲ್ಲೂ ತಪ್ಪಿಲ್ಲ. ಆದರೆ, ವಾಸ್ತವಿಕವಾಗಿ ಯಾವ ಯಾವ ಯಾವ ಜಿಲ್ಲೆಗೆ ಅವಕಾಶ ಕೊಟ್ಟಿಲ್ಲಆ ಎಲ್ಲಾ ಜಿಲ್ಲೆಗಳಿಗೆ ಅವಕಾಶ ಕೊಟ್ಟರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರೋಕೆ ಅವಕಾಶ ಆಗುತ್ತೆ ಎಂದಿದ್ದಾರೆ.
ಇದನ್ನೂ ಓದಿ : ರಸ್ತೆ ಮಧ್ಯೆ ಸಾರಿಗೆ ಬಸ್ಗಳನ್ನು ಅಡ್ಡಗಟ್ಟಿದ ಒಂಟಿ ಸಲಗ.. ವಿಡಿಯೋ ವೈರಲ್



















