ಬೆಂಗಳೂರು : ನಗರದ ಶಾಂತಿನಗರ ಬಿಎಂಟಿಸಿ ಬಸ್ ಸ್ಟಾಪ್ ಬಳಿ ಡ್ರಿಂಕ್ ಅಂಡ್ ಡ್ರೈವ್ (ಡಿಡಿ) ತಪಾಸಣೆ ನಡೆಸುತ್ತಿದ್ದ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿ ಮತ್ತು ಮಹಿಳೆಯೊಬ್ಬರ ಮಧ್ಯೆ ವಾಗ್ವಾದ ನಡೆದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಡಿಡಿ ಚೆಕ್ ವೇಳೆ ಮಹಿಳೆಯನ್ನು ನಿಲ್ಲಿಸಿದಾಗ, ನನಗೆ ಬೇರೆ ಕೆಲಸ ಇದೆ, ಮಹಿಳೆಯರನ್ನು ಹೇಗೆ ನಿಲ್ಲಿಸಿ ಚೆಕ್ ಮಾಡ್ತೀರಾ? ಎಂದು ಪ್ರಶ್ನಿಸಿ ಆಕೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ಮಹಿಳೆಯರನ್ನು ಹೇಗೆ ಡಿಡಿ ಚೆಕ್ ಮಾಡ್ತೀರಾ? ಎಂದು ಮಹಿಳೆ ಕೂಗಾಡಿರೋದು ಕೂಡ ವಿಡಿಯೋದಲ್ಲಿ ಕಾಣಿಸುತ್ತದೆ.
ಸ್ಥಳದಲ್ಲಿ ಗಲಾಟೆ ಹೆಚ್ಚಾಗದಂತೆ ನೋಡಿಕೊಂಡ ಪೊಲೀಸ್ ಸಿಬ್ಬಂದಿ, ಪರಿಸ್ಥಿತಿಯನ್ನು ಶಮನಗೊಳಿಸಲು ‘ಸಾರಿ’ ಹೇಳಿ ವಿಚಾರವನ್ನು ಅಲ್ಲಿಯೇ ಮುಗಿಸಿದಂತೆ ತಿಳಿದುಬಂದಿದೆ. ಆದರೆ, ಮಹಿಳೆ ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪ್ರಕರಣ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ಗ್ಯಾರಂಟಿಗಳನ್ನ ರಾಜ್ಯ ಸರ್ಕಾರ ಕೊಟ್ಟಿದೆ, ಇದರಿಂದ ಹೊರೆಯಾಗ್ತಿದೆ | ಡಿಕೆಶಿ



















