ಮೈಸೂರು : ಯತೀಂದ್ರ ಹೆಸರಿನ ಹಿಂದೆ ಸಿದ್ದರಾಮಯ್ಯ ಅಂತಾ ಇರದೆ ಇದ್ದಿದ್ದರೆ ನಿಮ್ಮನ್ನು ಯಾರು ಕ್ಯಾರೆ ಅಂತಿರಲಿಲ್ಲ. ಅಪ್ಪನ ಹೆಸರಿಂದ ಅಸ್ತಿತ್ವ ಉಳಿಸಿಕೊಂಡ ನೀವು ನಂಗೆ ಪಾಠ ಹೇಳಬೇಡಿ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ, ವಾಗ್ದಾಳಿ ನಡೆಸಿದ್ದಾರೆ.
ಕೆಲಸ ಇಲ್ಲದವರ ಆರೋಪಕ್ಕೆ ಉತ್ತರ ಕೊಡಲ್ಲ ಎಂಬ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಮಾತಿಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಕೆಲಸ ಅಂದರೆ ಬರೀ ವರ್ಗಾವಣೆ ಮಾಡಿಸೋದಾ? ಅಪ್ಪನ ಅಧಿಕಾರ ದುರುಪಯೋಗ ಮಾಡಿಕೊಂಡು ಮ್ಯಾಟ್ರಿಕ್ಸ್ ಲ್ಯಾಬ್ ಹೆಸರಲ್ಲಿ ಹಣ ಮಾಡೋದೆ ಕೆಲಸನಾ? ನೀವು ಜಸ್ಟ್ ಎಂಎಲ್‌ಸಿ ಅಸಷ್ಟೇ. ನೀವು ಯಾವ ಕೆಪಾಸಿಟಿ ಮೇಲೆ ವರ್ಗಾವಣೆ ಮಾಡಿಸುತ್ತೀರಾ? ಯತೀಂದ್ರ ಅವರೇ ನಿಮ್ಮಂಥ ಕೆಲಸವನ್ನು ನಾನು ಯಾವತ್ತೂ ಮಾಡಲ್ಲ. ವರ್ಗಾವಣೆ ದಂಧೆ ಕೆಲಸ ನಿಮಗೆ ಇರಲಿ ಎಂದು ತಿರುಗೇಟು ನೀಡಿದ್ದಾರೆ.
ನಿಮ್ಮ ಅಪ್ಪನೂ ನಾಲ್ಕು ಬಾರಿ ಚುನಾವಣೆಯಲ್ಲಿ ಸೋತಿದ್ದರು. ಆಗ ಅವರನ್ನು ಕೆಲಸ ಇಲ್ಲದವರು ಅಂತೀದ್ರಾ? ನಂಗೆ ಟಿಕೆಟ್ ತಪ್ಪಿದೆ ಅಷ್ಟೆ, ಅಸ್ಲೇಂಬಿಗೆ ಮೈಸೂರಿನಿಂದಲೇ ಗೆದ್ದು ಬರ್ತಿನಿ. ಅವತ್ತು ನೀವು ಎಲ್ಲಿ ಇರುತ್ತೀರಾ ನೋಡ್ತಿನಿ. ಹಿಂಬಾಗಲಿನಿಂದ ನಿಮ್ಮ ರೀತಿ ಅಸೆಂಬ್ಲಿಗೆ ಬರುವ ಜಾಯಮಾನ ನನ್ನದ್ದಲ್ಲ. ನಿಮ್ಮ ಅಪ್ಪ ಅರಾಮಾಗಿ ಬೆಂಗಳೂರಿನಿಂದ ಮೈಸೂರಿಗೆ ಓಡಾಡುತ್ತಿರುವ ರಸ್ತೆ ಮಾಡಿಸಿದ್ದು ಈ ಪ್ರತಾಪ್ ಸಿಂಹ ಅನ್ನೋದು ನೆನಪಿರಲಿ. ನಿಮ್ಮ ಅಪ್ಪ ಮೈಸೂರಿಗೆ ಈ ರೀತಿಯ ಒಂದು ರೋಡ್ ಮಾಡಿಸಿದ್ದಾರಾ ಹೇಳಿ ಎಂದು ಕಿಡಿಕಾರಿದ್ದಾರೆ.
ಯಾರೋ ಛೇಲಾಗಳ ಕೈಯಲ್ಲಿ ಪ್ರತಾಪ್ ಸಿಂಹ ವರುಣದಿಂದ ಸ್ಪರ್ಧೆ ಮಾಡಲಿ ಎಂದು ಹೇಳಿಸುತ್ತಿದ್ದಿರಾ. ಸಿದ್ದರಾಮಯ್ಯಗೆ ತಾಖತ್ ಇದ್ದರೆ ಮೈಸೂರು ಸಿಟಿಯಲ್ಲಿ ಸ್ಪರ್ಧೆ ಮಾಡೋಕೆ ಹೇಳಿ ನೋಡೋಣಾ ಎಂದು ಯತೀಂದ್ರ ಅವರಿಗೆ ಸವಾಲ್ ಹಾಕಿದ್ದಾರೆ.
ಇದನ್ನೂ ಓದಿ : ಎಲೆಕ್ಟ್ರಿಕ್ ಯುಗಕ್ಕೆ ರಾಯಲ್ ಎನ್‌ಫೀಲ್ಡ್ ಎಂಟ್ರಿ | ಸಿದ್ಧವಾಗಿದೆ ಚೊಚ್ಚಲ ಇ-ಬೈಕ್ ‘ಫ್ಲೈಯಿಂಗ್ ಫ್ಲೀ C6’



















