ಶಿವಮೊಗ್ಗ : ಪೊಲೀಸಪ್ಪನ ಕಾಟಕ್ಕೆ ಬೇಸತ್ತು ಮಹಿಳೆಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆಯೊಂದು ವರದಿಯಾಗಿದೆ. ಈ ಆಘಾತಕಾರಿ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ವಿಧವೆ ಮಹಿಳೆ ವಾಟ್ಸಾಪ್‌ನಲ್ಲಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ವಾತಿ ಎಂಬ ಮಹಿಳೆ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್‌ನಲ್ಲಿ ಕರ್ತವ್ಯ ನಿರ್ವಹಿಸುವ ಮೋಹನ್ ಹೆಸರು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ತಂದೆ ಮತ್ತು ತಾಯಿ ಸಾವಿನಿಂದ ಹೆಣ್ಣು ಮಕ್ಕಳ್ಳಿಬ್ಬರು ಅನಾಥವಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬಸ್ಥರು ಟಾರ್ಚರ್ ಕೊಟ್ಟಿರುವ ಪೊಲೀಸ್‌ನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಸ್ವಾತಿಗೆ ಮದುವೆ ಆಗಿ 7 ವರ್ಷಗಳಾಗಿದ್ದವು. ಒಂದು ವಾರದ ಹಿಂದಷ್ಟೇ ಪತಿ ಜಗದೀಶ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಪೊಲೀಸ್ ಮೋಹನ್, ಸ್ವಾತಿಗೆ ಫೇಸ್‌ಬುಕ್‌ನಲ್ಲಿ ಮೆಸೇಜ್ ಮಾಡಿದ್ದ. ಆಗ ಬ್ಲಾಕ್ ಮಾಡಿದ್ದಾರೆ. ಇದರಿಂದ ಕೋಪಗೊಂಡ ಪಾಪಿ ಮತ್ತೊಂದು ಐಡಿಯಿಂದ ಮಹಿಳೆ ಬಗ್ಗೆ ಅಪಪ್ರಚಾರ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸ್ವಾರಿ ಅಮ್ಮ. ನನ್ನ ಬಗ್ಗೆ ಇಲ್ಲದೆ ಇರುವುದು ಎಲ್ಲಾ ಕೆಟ್ಟದಾಗಿ ಜನಗಳ ಹತ್ತಿರ ಮೋಹನ್ ಹೇಳಿದ್ದಾರೆ. ನನಗೆ ತಡಿಯುವುದಕ್ಕೆ ಆಗುತ್ತಿಲ್ಲ. ನನ್ನ ಗಂಡ ಸತ್ತಿದು ಫುಲ್ ಡ್ರಿಂಕ್ಸ್ ಮಾಡಿ. ಈ ಮೋಹನ್ ಎನ್ನುವ ಪೊಲೀಸ್ ನನ್ನ ಬಗ್ಗೆ ಕೆಟದಾಗಿ ಜನಗಳ ಹತ್ತಿರ ಏನೇನೋ ಹೇಳಿರುವುದು ನನಗೆ ಈಗ ಬೆಳಿಗ್ಗೆ ವಿಷಯ ಗೊತಾಯ್ತು. ಅವನ ಮಾತ್ರ ಸಮ್ಮನೇ ಬಿಡಬೇಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಡೆತ್ ನೋಟ್ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : 2030ರ ವಿಶ್ವಕಪ್ ಸಿದ್ಧತೆಗಾಗಿ ಬೀದಿ ನಾಯಿಗಳ ಮಾರಣಹೋಮ | ಜಾಗತಿಕ ಮಟ್ಟದಲ್ಲಿ ಮೊರಾಕ್ಕೊ ವಿರುದ್ಧ ಆಕ್ರೋಶ



















