ಮಂಡ್ಯ : ಯಾರಾದರೂ ಸ್ಪಾನ್ಸರ್ ಮಾಡಿರ್ಲಿ, ಅಥವಾ ಕದ್ದು ಫಾರಿನ್ ಹೋಗಿರ್ಲಿ, ಫಾರಿನಲ್ಲಿ ಕೂತ ಮಾತ್ರಕ್ಕೆ ಸಿಎಂ ಬದಲಾಗಲ್ಲ ಎಂದು MLA ಗಣಿಗ ರವಿಕುಮಾರ್ ಹೇಳಿದ್ದಾರೆ.
ಮಂಡ್ಯದಲ್ಲಿ ಡಿಕೆ ಬೆಂಬಲಿಗರು ಫಾರಿನ್ ಟೂರ್ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಗಣಿಗ ರವಿಕುಮಾರ್, ಸರ್ಕಾರ ಕೂಡ ಬದಲಾಯಿಸಲು ಆಗಲ್ಲ. ಏನಿದ್ರು ಹೈಕಮಾಂಡ್, ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ತೀರ್ಮಾನ ಮಾಡಬೇಕು. ಗಣಿಗ ರವಿಕುಮಾರ್ 50 ಜನ ಶಾಸಕರನ್ನ ಕರೆದುಕೊಂಡು ಹೋದ್ರು ಬದಲಾವಣೆ ಮಾಡಕ್ಕಾಗಲ್ಲ. ಹೈಕಮಾಂಡ್ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಮಾಡತ್ತೆ ಎಂದು ಹೇಳಿದ್ದಾರೆ.
ಎಲ್ಲಿವರೆಗೂ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿ ಪುಲಿಸ್ಟಾಪ್ ಇಡಲ್ವೊ ಅಲ್ಲಿವರೆಗೂ ಇದು ಚೆರ್ಚೆ ಆಗ್ತಲೆ ಇರತ್ತೆ. ಇದು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವಾಗತ್ತೆ. ಸುಮ್ಮನೆ ಟೈಮ್ ಪಾಸ್ ರೀತಿ ನಡೆಸಿಕೊಂಡರೆ ಆಗೋದಿಲ್ಲ ಏನಾದರೂ ಒಂದು ನಿರ್ಧಾರ ಮಾಡಬೇಕು ದಿನಕ್ಕೆ ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡೋದ್ರಿಂದ ಸರ್ಕಾರಕ್ಕೆ ಪಕ್ಷಕ್ಕೆ ಹಾನಿಯಾಗತ್ತೆ. ಹೈಕಮಾಂಡ್ ಕೂಡಲೇ ಮಧ್ಯ ಪ್ರವೇಶ ಮಾಡಬೇಕು ಎಂದಿದ್ದಾರೆ.
ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡ್ತಿವಿ ಅಥವಾ ಇಲ್ಲ ಅಂತಲಾದರೂ ಹೈಕಮಾಂಡ್ ಹೇಳಬೇಕು. ಇಲ್ಲಾಂದ್ರೆ ಇದೆ ರೀತಿ ಟೂರು, ರೆಸಾರ್ಟ್ ಹೋಗ್ತಿರುತ್ತಾರೆ. ಮಧ್ಯ ಪ್ರವೇಶಿಸದಿದ್ರೆ ಪಕ್ಷಕ್ಕೆ ಡ್ಯಾಮೇಜ್. ಹೈಕಮಾಂಡ್ ಹೇಳಬೇಕು. ಇಲ್ಲಾಂದ್ರೆ ಇದೆ ರೀತಿ ಟೂರು, ರೆಸಾರ್ಟ್ ಹೋಗ್ತಿರುತ್ತಾರೆ. ಮಧ್ಯ ಪ್ರವೇಶಿಸದಿದ್ರೆ ಪಕ್ಷಕ್ಕೆ ಡ್ಯಾಮೇಜ್. ಹೈಕಮಾಂಡ್ ಇದನ್ನು ಇತ್ಯರ್ಥ ಮಾಡಲೇಬೇಕು ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ.
ಇದನ್ನೂ ಓದಿ : ಬಾಡಿಗೆ ಮನೆಯಲ್ಲಿ ಮಂಗಳಮುಖಿ-ಯುವಕನ ನಿಗೂಢ ಸಾವು.. ಆತ್ಮಹತ್ಯೆನಾ? ಕೊಲೆನಾ?



















