ಬೆಳಗಾವಿ : ಬೆಳಗಾವಿ ಜಿಲ್ಲೆಯ ನಂದಗಡದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಯಶೋಗಾಥೆಯನ್ನು ಸಾರುವ ವಸ್ತು ಸಂಗ್ರಹಾಲಯ ಹಾಗೂ ರಾಯಣ್ಣನ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಉದ್ಘಟನೆ ಮಾಡಿದ್ದಾರೆ.
ಉದ್ಘಟನೆಯ ಬಳಿಕ ಸಿಎಂ ವಸ್ತು ಸಂಗ್ರಹಾಲಯ ಮತ್ತು ವೀರಭೂಮಿಯನ್ನು ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಿವರಾಜ್ ತಂಗಡಗಿ ಸೇರಿ ಹಲವರು ಸಾಥ್ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಢದ ರಾಯಣ್ಣನ ಗಲ್ಲಿಗೆರಿಸಿದ ಸ್ಥಳದಲ್ಲಿ ಸಂಗೊಳ್ಳಿ ರಾಯಣ್ಣ ಹೆಸರಲ್ಲಿ 100ಎಕರೆ ಪ್ರದೇಶದಲ್ಲಿ ಸೈನಿಕ ಶಾಲೆ ನಿರ್ಮಾಣ ಮಾಡಲಾಗಿದ್ದು, ರಾಯಣ್ಣ ಬಾಲ್ಯದಿಂದ ಗಲ್ಲಿಗೇರಿಸಿದವರೆಗಿನ ಇತಿಹಾಸವನ್ನು ಸಾರುವ ವೀರಭೂಮಿ ಸ್ಥಾಪನೆ ಮಾಡಿ, ಕಲ್ಯಾಣ ಮಂಟಪ ನವೀಕರಣ, ರಾಯಣ್ನನನ್ನು ಗಲ್ಲಿಗೇರಿಸಿದ ಆಲದ ಮರದ ಸ್ಥಳದಲ್ಲಿ ವಸ್ತು ಸಂಗ್ರಹಾಲಯ ನಿರ್ಮಾಣ ಹಾಗೂ ಸಮಾಧಿ ಬಳಿಯಲ್ಲಿ ಕೆರೆ ಅಭಿವೂದ್ಧಿಗೆ ಕ್ರಮ ಕೈಗೊಳ್ಳಲಾಗಿದೆ.
ಈ ವಸ್ತು ಸಂಗ್ರಹಾಲಯವು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನ ಮತ್ತು ಹೋರಾಟದ ಕುರಿತಾದ ಮೂರ್ತಿಶಿಲ್ಪ, ಉಬ್ಬುಶಿಲ್ಪ, ಮಾಹಿತಿ ಫಲಕ, ಕಥಾಚಿತ್ರ ಹಾಗೂ ರೊಬೋಟಿಕ್ ತಂತ್ರಜ್ಞಾನ, ಡೈಮೆನ್ನನ್ ಚಿತ್ರಮಂದಿರ-ಧ್ವನಿ ಪಭಾವದಿಂದ ನೋಡುಗನ ಮನಸ್ಸಿನಲ್ಲಿ ರಾಯಣ್ಣನ ಕ್ರಾಂತಿಯ ಘಟನೆಗಳನ್ನು ಬಿಂಬಿಸುವ ಹಾಗೆ ಪ್ರದರ್ಶಿಸಲಾಗಿದೆ.
ಇದನ್ನೂ ಓದಿ: ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರಗೆ ಸಂಕಷ್ಟ | ಲೋಕಾಯುಕ್ತಕ್ಕೆ ದೂರು!



















