ಮೈಸೂರು : ಮೈಸೂರಿನ ಕೇಂದ್ರ ಬಸ್ ನಿಲ್ದಾಣದ ಯುವರಾಜ್ ಗೆಲಕ್ಸಿ ಹೊಟೇಲ್‌ನಲ್ಲಿ ಆರ್‌ಎಫ್‌ಓ ಶವ ಪತ್ತೆಯಾಗಿದೆ.
ಆರ್‌ಎಫ್‌ಓ ಕಾಂತರಾಜ್ ಚೌಹಾಣ್ ಅವರು 15 ದಿನದ ಹಿಂದೆಯಷ್ಟೇ ನರಸೀಪುರಕ್ಕೆ ವರ್ಗವಾಗಿದ್ದರು. ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ಸ್ನೇಹಿತ ಮಲ್ಲನಗೌಡ ಪಾಟೀಲ್ ಜೊತೆಗೆ ನಿನ್ನೆ ಮಧ್ಯಾಹ್ನ ಮಲ್ಲನಗೌಡ ರೂಂ ಬುಕ್ ಮಾಡಿದ್ದರು. ಆದರೆ ಏಕಾಏಕಿ ಮೃತಪಟ್ಟಿದ್ದಾರೆ. ಯುವರಾಜ್ ಗೆಲಾಕ್ಸಿ ಹೋಟೆಲ್ ಸಮೀಪದ ಕುಮಾರನ್ ಜ್ಯುವೆಲರ್ಸ್ ಹಿಂಭಾಗದ ಕಾರಿಡಾರ್ನಲ್ಲಿ ಕಾಂತರಾಜ್ ಚೌಹಾಣ್ ಶವ ಬಿದ್ದಿತ್ತು. ಇನ್ನು ಇತ್ತ ಕಾಂತರಾಜ್ ಸ್ನೇಹಿತ ಮಲ್ಲನಗೌಡ ಪಾಟೀಲ್ ಪರಾರಿಯಾಗಿದ್ದಾನೆ.
ಸದ್ಯ ಅವರ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದು, ಘಟನಾ ಸ್ಥಳಕ್ಕೆ ಲಷ್ಕರ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ : ಅನೈತಿಕ ಸಂಬಂಧಕ್ಕೆ ಅಡ್ಡ ಬಂದ 5 ವರ್ಷದ ಮಗನನ್ನೇ ಕೊಂದ ತಾಯಿಗೆ ಜೀವಾವಧಿ ಶಿಕ್ಷೆ



















