ಬೆಂಗಳೂರು : ಬೆಂಗಳೂರಲ್ಲಿ ಬೇಕರಿ ಮಾಲೀಕರಿಗೆ ಪೊಲೀಸರಿಂದ ಕಿರುಕುಳ ಆರೋಪ ಹಿನ್ನಲೆ ಗೃಹಸಚಿವ ಪರಮೇಶ್ವರ್‌ಗೆ ಕಾಂಡಿಮೆಂಟ್ಸ್ ಸಂಘದ ವತಿಯಿಂದ ದೂರು ನೀಡಲಾಗಿದೆ.
ನಿನ್ನೆ ಸಚಿವರನ್ನು ಭೇಟಿ ಮಾಡಿದ ಕರ್ನಾಟಕ ರಾಜ್ಯ ಬೇಕರಿ, ಕಾಂಡಿಮೆಂಟ್ಸ್ ಸಂಘವು ಗೃಹ ಸಚಿವ ಪರಮೇಶ್ವರ್‌ಗೆ ಜಿಬಿಎ, ಪೊಲೀಸರಿಂದ ನಿರಂತರ ಕಿರುಕುಳ ಆಗುತ್ತಿದೆ. ಜಯನಗರದ ಕಾಂಡಿಮೆಂಟ್ಸ್‌ನಲ್ಲಿ ಜಿಬಿಎ ಅಧಿಕಾರಿಗಳು ನಿಯಮದ ಹೆಸರಲ್ಲಿ ಸಿಗರೇಟ್ ಹೊತ್ತ್ಯೊಯ್ದಿದ್ದಾರೆ. ಸಿಗರೇಟ್ ಮಾರುವುದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗಿದೆ ಎಂದು ಆರೋಪಿಸಿದ್ದಾರೆ.
ಜಿಬಿಎ, ಆರೋಗ್ಯ ಇಲಾಖೆ, ಜಿಎಸ್‌ಟಿ, ಮೌಲ್ಯಮಾಪನ ಅಧಿಕಾರಿಗಳಿಂದ ನಿರಂತರ ದೌರ್ಜನ್ಯವಾಗುತ್ತಿದೆ. ಹೀಗಾಗಿ ನಮಗೆ ರಕ್ಷಣೆ ನೀಡಿ ಎಂದು ಬೇಕರಿ ಸಂಘವು ಗೃಹಸಚಿವ ಪರಮೇಶ್ವರ್‌ಗೆ ಮನವಿ ಮಾಡಿದೆ.
ಇದನ್ನೂ ಓದಿ : ಮಕ್ಕಳನ್ನ ವಾಕಿಂಗ್ ಕರೆದೊಯ್ಯುವ ಪೋಷಕರೇ ಎಚ್ಚರ | 5 ವರ್ಷದ ಮಗುವಿಗೆ ರಸ್ತೆಯಲ್ಲಿ ಹಾವು ಕಡಿತ



















