ಬೆಂಗಳೂರು: ಹೊಸ ಹುರುಪಿನೊಂದಿಗೆ ಕರ್ನಾಟಕ ಜನತೆ 2026 ರ ವರ್ಷವನ್ನ ಸ್ವಾಗತಿಸಿದ್ದಾರೆ. ರಾಜ್ಯಧಾನಿಯಲ್ಲಿ ಯುವಕ, ಯುವತಿಯರು ರಸ್ತೆಗಳಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಪರಸ್ಪರ ಹೊಸ ವರ್ಷದ ಶುಭಾಶಯ ಕೋರಿದರು. ಹೊಸ ವರ್ಷದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಕೇಂದ್ರಗಳಾದ ಬೆಂಗಳೂರಿನ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಇಂದಿರಾ ನಗರ, ಕೋರಮಂಗಲ ವರ್ಣರಂಜಿತವಾಗಿ ಮಿರಿ ಮಿರಿ ಮಿಂಚುತ್ತಿದ್ದವು.

ಈ ವೇಳೆ ಕುಡಿದ ಮತ್ತಿನಲ್ಲಿದ್ದ ಯುವಕನೊಬ್ಬ ನಮ್ಮ ತಂದೆ ಸರ್ಕಲ್ ಇನ್ಸ್‌ಪೆಕ್ಟರ್ ಎಂದು ಪೊಲೀಸರಿಗೇ ಅವಾಜ್ ಹಾಕಿದ್ದಾನೆ. ಸೆಲ್ಫಿ ತೆಗಯೋಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಪೊಲೀಸ್ರಿಗೆ ಧಮ್ಕಿ ಹಾಕಿದ್ದಾನೆ. ಮತ್ತೊಂದು ಕಡೆ ಯುವತಿಯೊಬ್ಬಳು ಎಣ್ಣೆ ಕಿಕ್‌ನಲ್ಲಿ ಯುವಕನೊಂದಿಗರ ರಂಪಾಟ ಮಾಡಿಕೊಂಡಿರುವ ಪ್ರಸಂಗಗಳು ನಡೆದಿವೆ.
ಧನ್ಯವಾದ ಸಮರ್ಪಣೆ
ಕಳೆದ ವರ್ಷ ಆಗಿದ್ದಂತಹ ರಾದ್ಧಾಂತಗಳು ಈ ಬಾರಿ ತಪ್ಪಿತ್ತು. ಸಂಭ್ರಮಾಚಣೆ ಶಾಂತಿಯುತ ಹಾಗೂ ಸಂಭ್ರಮದಿಂದಲೇ ನೆರವೇರಿತು. ಹೀಗಾಗಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಧನ್ಯವಾದ ಅರ್ಪಿಸಿದರು. ಸಾರ್ವಜನಿಕರು ಹಾಗೂ ನಮ್ಮ ಪೊಲೀಸ್ ಇಲಾಖೆ ಸಿಬ್ಬಂದಿ ಸಹಕರಿಸಿದ್ದಾರೆ. ಎಲ್ಲವೂ ಶಾಂತಿಯುತವಾಗಿ ನೆರವೇರಿದೆ. ಮುಂದಿನ ದಿನಗಳಲ್ಲೂ ಇದೇ ರೀತಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ; Happy New Year | ಹೊಸ ವರ್ಷಕ್ಕೆ ಗ್ರ್ಯಾಂಡ್ ವೆಲ್‍ಕಂ ನೀಡಿದ ಬೆಂಗಳೂರು


















