ಬೆಂಗಳೂರು:ಮಾಗಡಿ ರಸ್ತೆಯ ಬಿನ್ನಿಪೇಟೆ ಅಂಜನ್ ಚಿತ್ರಮಂದಿರ ಬಳಿ ಇರುವ ರಾಜರಾಜೇಶ್ವರಿ ಜ್ಯುವೆಲ್ಸ್ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಸಭ್ಯಸ್ತನ ರೀತಿ ಅಂಗಡಿಗೆ ಎಂಟ್ರಿ ಕೊಟ್ಟ ಖದೀಮ, ಮಾಲೀಕರನ್ನು ಯಾಮಾರಿಸಿ ಕೇವಲ ಕ್ಷಣಾರ್ಧದಲ್ಲಿ 10 ಗ್ರಾಂ ಚಿನ್ನದ ಒಡವೆಯನ್ನು ಕದ್ದು ಪರಾರಿಯಾಗಿದ್ದಾನೆ.
ಅಂಗಡಿ ಮಾಲೀಕ ಒಳಗೆ ಹೋಗಿ ಬರುವಷ್ಟರಲ್ಲಿ ಈ ಕರಾಮತ್ತು ನಡೆದಿದ್ದು, ಮಾಲೀಕರು 1.5 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನವನ್ನು ಕಳೆದುಕೊಂಡಿದ್ದಾರೆ. ಖದೀಮ ಚಿನ್ನ ಕದ್ದು ಓಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

















