ಬೆಂಗಳೂರು:ಪುಲಿಕೇಶಿ ನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದ ಸ್ಪೋಟ ಪ್ರಕರಣದ ತನಿಖೆಯನ್ನು ಪುಲಿಕೇಶಿನಗರ ಪೊಲೀಸರು ತೀವ್ರಗೊಳಿಸಿದ್ದು, ನಿಖರತೆಗಾಗಿ ಎಫ್ಎಸ್ಎಲ್ ವರದಿಗಾಗಿ ಕಾಯುತ್ತಿದ್ದಾರೆ.
ಪೂರ್ವ ವಿಭಾಗ ಡಿಸಿಪಿ ನೇತೃತ್ವದಲ್ಲಿ ಐದಕ್ಕೂ ಅಧಿಕ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಪಾರ್ಸೆಲ್ ತಂದಿಟ್ಟವರ ಪತ್ತೆಗಾಗಿ ಈಗಾಗಲೇ 100ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಗಿಫ್ಟ್ ಕೊರಿಯರ್ ಮಾಡಿದರೆ ಸಿಕ್ಕಿಬೀಳುವ ಭಯದಿಂದ ಆರೋಪಿಗಳ ತಂಡದವರೇ ನೇರವಾಗಿ ಬಂದು ಪಾರ್ಸೆಲ್ ನೀಡಿರುವ ಶಂಕೆ ವ್ಯಕ್ತವಾಗಿದೆ.

















