ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹೊಸೂರು ಹೆದ್ದಾರಿಯಲ್ಲಿ ರಾತ್ರಿ ವೇಳೆ ಬೈಕ್ ಸವಾರನೊಬ್ಬ ಡೆಡ್ಲಿ ವ್ಹೀಲಿಂಗ್ ಮಾಡಿದ್ದಾನೆ. ನಂಬರ್ ಪ್ಲೇಟ್ ಇಲ್ಲದ, ವ್ಹೀಲಿಂಗ್ ಮಾಡಲೆಂದೇ ಮಾರ್ಪಾಡು ಮಾಡಲಾಗಿದ್ದ ಡಿಯೋ ಬೈಕ್ನಲ್ಲಿ ಹೆದ್ದಾರಿಯ ವಾಹನಗಳ ನಡುವೆ ಈ ಕೃತ್ಯ ಎಸಗಲಾಗಿದೆ.
ಕಾರು ಸವಾರರು ಈ ವ್ಹೀಲಿಂಗ್ ಅನ್ನು ಸೆರೆ ಹಿಡಿದಿದ್ದು, ವಿಡಿಯೋ ಮಾಡುತ್ತಿರುವುದು ತಿಳಿದರೂ ಪುಂಡ ಯಾವುದೇ ಭಯವಿಲ್ಲದೆ ಪೋಸ್ ನೀಡಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವ್ಹೀಲಿಂಗ್ ಪುಂಡರ ಹಾವಳಿಗೆ ಸಂಚಾರಿ ಪೊಲೀಸರು ಬ್ರೇಕ್ ಹಾಕಬೇಕಿದೆ.


















