ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ದೇಪಾಪುರ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಕೀಡಾಗಿದ್ದರು. ಇದೀಗ ಅರಣ್ಯಾ ಇಲಾಖೆಯ ಕಾರ್ಯಚರಣೆಯಿಂದ ಹುಲಿಯನ್ನು ಸೆರೆ ಹಿಡಿದಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಹುಲಿ ಕಾಣಿಸಿಕೊಂಡ ಹಿನ್ನೆಲೆ ಕೃಷಿ ಚಟುವಟಿಕೆಗೆ ತೆರಳಲು ಸ್ಥಳೀಯರು ಭಯಭೀತರಾಗಿದ್ದರು. ಹಾಗಾಗಿ ಹುಲಿ ಸೆರೆ ಹಿಡಿಯುವಂತೆ ಕಾಡಂಚಿನ ಜನ ಒತ್ತಾಯಿಸುತ್ತಿದ್ದರು. ಹುಲಿ ಸೆರೆಗಾಗಿ ಬೇನಿರಿಸಿದ್ದ ಅರಣ್ಯ ಇಲಾಖೆ ,ಕೊನೆಗೂ ಸೆರೆ ಹಿಡಿದಿದ್ದಾರೆ. ಸುರಕ್ಷಿತ ಸ್ಥಳಕ್ಕೆ ಹುಲಿ ರವಾನಿಸಿದ್ದು, ಇನ್ನೊಂದೆಡೆ ಚಾಮರಾಜನಗರ ತಾಲ್ಲೂಕಿನ ನಂಜೆದೇವಪುರದಲ್ಲಿ ಐದು ಹುಲಿಗಳ ಸೆರೆಗೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಹೊಸೂರು ಬಳಿ ಗಜಪಡೆ ಪ್ರತ್ಯಕ್ಷ | 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು!



















