ಬೆಂಗಳೂರು: ಪಲ್ಸ್ ಪೋಲಿಯೋ ಲಸಿಕಾ ದಿನದ ಅಂಗವಾಗಿ ಡಿಸೆಂಬರ್ 21 ರಿಂದ 24 ರವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಲಸಿಕಾ ಅಭಿಯಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮಕ್ಕೆ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಆಯುಕ್ತ ದಲ್ಜಿತ್ ಕುಮಾರ್ ಚಾಲನೆ ನೀಡಿದ್ದಾರೆ.

ಜೀವದ ರಕ್ಷಾ ಕವಚವಾದ ಎರಡು ಹನಿ ಪಲ್ಸ್ ಪೋಲಿಯೋವನ್ನು ನವಜಾತ ಶಿಶುವನ್ನು ಒಳಗೊಂಡಂತೆ 5 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಹಾಕಿಸುವಂತೆ ಸಾರ್ವಜನಿಕರಲ್ಲಿ ಈ ಜಾಥಾ ಕಾರ್ಯಕ್ರಮದ ಮೂಲಕ ವಿನಂತಿಸಲಾಗಿದೆ.
ಕಾಲ್ನಡಿಗೆ ಜಾಥಾದಲ್ಲಿ ಜಂಟಿ ಆಯುಕ್ತ ರಂಗನಾಥ್, ಹೇಮಂತ್ ಶರಣ್, ಆರೋಗ್ಯಾಧಿಕಾರಿ ಶಿವಕುಮಾರ್ ಡಾ. ಸುನೀತಾ, ಡಾ. ಧನ್ಯಕುಮಾರ್, ಉಪಸ್ಥಿತರಿದ್ದರು ಹಾಗೂ ಕೇಂದ್ರ ನಗರ ಪಾಲಿಕೆಯ ಶಾಲಾ ಕಾಲೇಜು ಮಕ್ಕಳು, ಆರೋಗ್ಯ ವಿಭಾಗದ ವೈದ್ಯರು/ ಸಿಬ್ಬಂದಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ:



















