ಬೆಂಗಳೂರು: ಯುವಕನೊಬ್ಬ ಅಡ್ಡಾದಿಡ್ಡಿ ಕಾರು ಚಾಲಯಿಸಿದ ಪರಿಣಾಮ ವೃದ್ಧನೊಬ್ಬ ಬಲಿಯಾಗಿರುವ ಘಟನೆ ಬೆಂಗಳೂರು ನಗರದ ಆರ್‌ಎಂವಿ ಎಕ್ಸ್‌ಟೆನ್ಷನ್ ಬಳಿ ನಡೆದಿದೆ.
ಚಂದ್ರಶೇಖರ ರೆಡ್ಡಿ (64) ಸ್ಥಳದಲ್ಲೇ ಸಾವನ್ನಪ್ಪಿರು ವ್ಯಕ್ತಿ. ಶಿಶಿರ್ ಸುಧೀರ್ ಪಾಟೀಲ್ (19) ಎಂಬ ಯುವಕನಿಂದ ಅಪಘಾತ ನಡೆದಿದ್ದು, ವೃದ್ಧನಿಗೆ ಗುದ್ದಿದ ಬಳಿಕ ಸಿಯಾಜ್ ಕಾರು ಅಲ್ಲೇ ನಿಂತಿದ್ದ ಎರ್ಟಿಗಾ ಕಾರಿಗೂ ಡಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ವೃದ್ಧ ಹಾರಿಬಿದ್ದು ಸಾವನ್ನಪ್ಪಿದ್ದಾರೆ.
ಇನ್ನೂ ಮೃತ ಚಂದ್ರಶೇಖರ್ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು, ಯುವಕ ಬಿಇ ಪ್ರಥಮ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾನೆ ಎನ್ನುವ ಮಾಹಿತಿ ತಿಳಿದುಬಂದಿದೆ..
ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ-ಯುವತಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಸದ್ಯ ಈ ಘಟನಾ ಸಂಬಂಧ ಸಂಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: RCB ಫ್ಯಾನ್ಸ್ಗೆ ಶುಭ ಸುದ್ದಿ | ಬೆಂಗಳೂರಿನಲ್ಲೇ ಈ ಬಾರಿಯ IPL ಉದ್ಘಾಟನಾ ಪಂದ್ಯ!


















