ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಜನಪ್ರಿಯ ತಾರೆ ಪ್ರೇಮಾ ಮುಖ್ಯಭೂಮಿಕೆಯ ‘ಓಂ’ ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರಗಳಲ್ಲೊಂದು. ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಕನ್ನಡದ ಮಾಸ್ಟರ್ ಪೀಸ್ ಈ ಸಾಲಿನಲ್ಲಿ 30 ವರ್ಷಗಳನ್ನು ಪೂರೈಸಿದೆ.
ಇದೀಗ ಈ ಚಿತ್ರದ ಕುರಿತು ಸ್ವತಃ ನಟ ಶಿವರಾಜ್‌ಕುಮಾರ್ ಅವರೇ ಹೇಳಿಕೆ ನೀಡಿದ್ದಾರೆ. ಹ್ಯಾಟ್ರಿಕ್ ಹೀರೋನ ವೃತ್ತಿಜೀವನದಲ್ಲೇ ಮೈಲಿಗಲ್ಲಾಗಿರುವ ‘ಓಂ’ ಚಿತ್ರದ ಮುಂದುವರಿದ ಭಾಗ ಬರಲಿದೆ ಎಂದು ಅಧಿಕೃತ ಹೇಳಿಕೆ ನೀಡಿದ್ದಾರೆ.
ಶಿವರಾಜ್‌ಕುಮಾರ್ ವರದಿಗಾರರೊಂದಿಗೆ ಮಾತನಾಡುತ್ತಾ”ಓಂ-2 ಬಗ್ಗೆ ನಾನು ಈಗಾಗಲೇ ನಟ ಉಪೇಂದ್ರ ಅವರೊಂದಿಗೆ ಮಾತನಾಡಿದ್ದೇನೆ. ಚಿತ್ರ ಶೀಘ್ರದಲ್ಲೇ ಬರಲಿದೆ. ಕನ್ನಡ ಜನರಂತೆ ತೆಲುಗು ಪ್ರೇಕ್ಷಕರೂ ಕೂಡಾ ತಮ್ಮನ್ನು ಬೆಂಬಲಿಸುತ್ತಾರೆಂದು ನಂಬಿದ್ದೇನೆ ಎಂದಿದ್ದಾರೆ.
ಸದ್ಯ ಓಂ-2′ ಬಗ್ಗೆ ಹೇಳಿಕೆ ನೀಡಿ, ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ. ಆದಷ್ಟು ಬೇಗ ಚಿತ್ರತಂಡದಿಂದ ಸಿನಿಮಾ ಘೋಷಣೆ ಆಗಲಿ, ಶೂಟಿಂಗ್ ಶುರುವಾಗಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ.
ಇದನ್ನೂ ಓದಿ : ಗಡಿ ಶಾಂತಿ, ಸ್ವತಂತ್ರ ನಿಲುವೇ ಭಾರತ ವಿದೇಶಾಂಗ ನೀತಿಯ ಆಧಾರ : ಚೀನಾ–ರಷ್ಯಾ–ಅಮೆರಿಕ ಸಂಬಂಧಗಳ ಬಗ್ಗೆ ಜೈಶಂಕರ್ ಸ್ಪಷ್ಟನೆ



















