ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ 7.11 ಕೋಟಿ ರೂಪಾಯಿ ದರೋಡೆಯಾಗಿರುವ ಘಟನೆ ನಡೆದಿದೆ. ಇನ್ನೋವಾ ಕಾರಿನಲ್ಲಿ ಬಂದ 7-8 ಜನರ ಗ್ಯಾಂಗ್, ಎಟಿಎಂಗೆ ಹಣ ಹಾಕಲು ಹೊರಟಿದ್ದ ಸಿಎಂಎಸ್ ಸಂಸ್ಥೆಯ ವಾಹನಬನ್ನು ತಡೆದು ಬರೋಬ್ಬರಿ 7.11 ಕೋಟಿ ರೂ. ದೋಚಿಕೊಂಡು ಪರಾರಿಯಾಗಿದೆ.

ಸೌತ್ ಎಂಡ್ ಸರ್ಕಲ್ ಬಳಿಯ ಎಟಿಎಂ ಕಡೆ ಹೊರಟಿದ್ದ ಹಣ ಇದ್ದ ವಾಹನವನ್ನು ಜಯದೇವ ಡೇರಿ ಸರ್ಕಲ್ನ ಬಳಿ ತಡೆದು ಹಣ ದೋಚಿಕೊಂಡು ದರೋಡೆಕೋರರು ಎಸ್ಕೇಪ್ ಆಗಿದ್ದಾರೆ.

ಗನ್ ಮ್ಯಾನ್ ಸೇರಿ ಉಳಿದ ಸಿಬ್ಬಂದಿಗೆ ಬೆದರಿಕೆ ಹಾಕಿದ ಗ್ಯಾಂಗ್‌ನಲ್ಲಿ ಸುಮಾರು ಏಳರಿಂದ ಎಂಟು ಜನ ಇದ್ರು ಅನ್ನೋದ್ರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕಾರಿಗೆ ಹಣವನ್ನ ತುಂಬಿಕೊಂಡು ಗ್ಯಾಂಗ್ ಪರಾರಿಯಾಗಿದ್ದು, ಮೇಲ್ನೋಟಕ್ಕೆ ಸಿಎಂಎಸ್ ಚಾಲಕ, ಸಿಬ್ಬಂದಿ ಮೇಲೂ ಅನುಮಾನ ವ್ಯಕ್ತವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸಿದ್ದಾಪುರ ಹಾಗೂ ಆಡುಗೋಡಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸ್ಥಳದಲ್ಲಿ ಪರಶೀಲನೆ ನಡೆಸುತ್ತಿದ್ದಾರೆ. ಚಾಲಕನನ್ನು ಕೂಡ ಪೊಲೀಸರು ಪೂರ್ವಾಪರ ವಿಚಾರಣೆ ಮಾಡ್ತಿದ್ದಾರೆ. ಹಾಗೆಯೇ ಪೊಲೀಸರ ಮತ್ತೊಂದು ತಂಡ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದೆ. ಹಣದೊಂದಿಗೆ ಎಸ್ಕೇಪ್ ಆಗಿರೋ ಇನ್ನೋವಾ ಕಾರ್ ಮೂಮ್ಮೆಂಟ್ ಬಗ್ಗೆ ಎಲ್ಲಾ ವಿಭಾಗ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಟ್ರಾಫಿಕ್ ಪೊಲೀಸ್ರಿಗೂ ವಾಹನದ ಸಂಖ್ಯೆ ಹಾಗೂ ಕಾರಿನ ಬಣ್ಣದ ಬಗ್ಗೆ ಸಂದೇಶ ರವಾನಿಸಲಾಗಿದೆ.
ಇದನ್ನೂ ಓದಿ : RCB ಖರೀದಿಗೆ ಮುಂದಾದ ಹೊಂಬಾಳೆ ಫಿಲ್ಮ್ಸ್? ಕನ್ನಡಾಭಿಮಾನಿಗಳ ಪ್ರಾರ್ಥನೆ ನಿಜವಾಗುತ್ತಾ?



















