ಬೆಂಗಳೂರು : ರಾಜಧಾನಿ ಬೆಂಗಳೂರಲ್ಲಿ ಡ್ರಾಪ್ ಮಾಡಿ ಹಣ ಕೇಳಿದ ಚಾಲಕನಿಗೆ ನಡುರಸ್ತೆಯಲ್ಲೇ ಚಾಕು ಇರಿದು ಪ್ರಯಾಣಿಕ ಪರಾರಿಯಾಗಿದ್ದಾನೆ.
ಈ ಘಟನೆ ಹೆಣ್ಣೂರು ಮುಖ್ಯರಸ್ತೆಯಲ್ಲಿ ನಡೆದಿದೆ. ಚಿಂತಾಮಣಿ ಮೂಲದ ಚಾಲಕ ಪ್ರದೀಪ್ ಮೈಸೂರಿನ ಅರಮನೆ ಮೈದಾನದ ಬಳಿಯಿಂದ ಪ್ರಯಾಣಿಕನನ್ನು ಪಿಕ್ ಅಪ್ ಮಾಡಿಕೊಂಡು ಬಂದಿದ್ದ ಡ್ರಾಪ್ ಸ್ಥಳದ ವರೆಗೂ ಬಂದು ಹಣ ಕೇಳಿದ ಅದಕ್ಕೆ ಪ್ರಯಾಣಿಕ ಚಾಕುವಿನಿಂದ ಕಣ್ಣಿನ ಭಾಗ ಸೇರಿದಂತೆ ಸಾಕಷ್ಟು ಕಡೆ ಇರಿದಿದ್ದಾನೆ. ಇಷ್ಟೇ ಅಲ್ಲದೆ ರಕ್ತಮಯವಾಗಿ ನಡುರಸ್ತೆಯಲ್ಲೇ ವಿಲವಿಲನೆ ಒದ್ದಾಡುತ್ತಿದ್ದ ಚಾಲಕನನ್ನು ರೋಡ್ ನಲ್ಲಿ ತಳ್ಳಿ ವಿಕೃತಿ ಮೆರೆದಿದ್ದಾನೆ.
ಬಳಿಕ ಕೀ ಕಸಿದು ಕಾರು ಸಮೇತ ಸ್ಥಳದಿಂದ ಪರಾರಿಯಾಗಿದ್ದು, ಕಾರನ್ನ ಇಡೀ ಬೆಂಗಳೂರನ್ನ ಸುತ್ತಿ ಕೊನೆಗೆ ವಿಕ್ಟೋರಿಯಾ ಆಸ್ಪತ್ರೆ ಬಳಿ ನಿಲ್ಲಿಸಿದ್ದಾನೆ. ಸ್ಥಳೀಯರ ಸಹಾಯದ ಮೂಲಕ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಣ್ಣೂರು ಪೊಲೀಸ್ರಿಂದ ಆರೋಪಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ : ಕೆಲಸ ಕೊಟ್ಟಿದ್ದ ಮಾಲೀಕನಿಗೆ ಚಾಕು ಇರಿದು, ಚಿನ್ನ ದೋಚಿ ಪರಾರಿ | ಆರೋಪಿ ಬಂಧನ



















