ಬೆಂಗಳೂರು: ಸಾಲಕ್ಕಾಗಿ ಅರ್ಜಿ ಸಲ್ಲಿಸುವವರ ಕ್ರೆಡಿಟ್ ಸ್ಕೋರ್ 575ಕ್ಕಿಂತ ಕಡಿಮೆ ಇದ್ದರೆ ಬ್ಯಾಂಕ್ ಗಳು ಸಾಲದ ಅರ್ಜಿಯನ್ನು ತಿರಸ್ಕರಿಸುತ್ತವೆ. ಕೆಲವೊಮ್ಮೆ ಸಾಲ ನೀಡಲು ಒಪ್ಪಿಗೆ ಸೂಚಿಸಿದರೂ, ಹೆಚ್ಚಿನ ಬಡ್ಡಿ ವಿಧಿಸುತ್ತವೆ ಎನ್ನುವುದು ಬಹುತೇಕರಿಗೆ ಗೊತ್ತಿರುವ ಸಂಗತಿ. ಆದರೆ, ಇನ್ನೂ ಕೆಲವೊಮ್ಮೆ ಬ್ಯಾಂಕ್ ಗಳು ಸಾಲಕ್ಕೆ ಅರ್ಜಿ ಸಲ್ಲಿಸುವವರ ಕ್ರೆಡಿಟ್ ಸ್ಕೋರ್ (Credit Score) ಅಗತ್ಯಕ್ಕಿಂತ ಹೆಚ್ಚಿದ್ದರೂ ಸಾಲದ ಅರ್ಜಿಯನ್ನು ತಿರಸ್ಕರಿಸುತ್ತವೆ. ಅರೆ, ಇದು ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ.
• ಹೆಚ್ಚಿನ ಕ್ರೆಡಿಟ್ ಸ್ಕೋರ್ ಇದ್ದರೂ, ವಯಸ್ಸಿನ ಕಾರಣದಿಂದಾಗಿ ಸಾಲದ ಅರ್ಜಿಯನ್ನು ಬ್ಯಾಂಕ್ ಗಳು ತಿರಸ್ಕರಿಸುತ್ತವೆ. ಯಾವುದೇ ಉದ್ಯೋಗಿಯು ಎರಡು-ಮೂರು ವರ್ಷದಲ್ಲಿ ನಿವೃತ್ತಿ ಹೊಂದುತ್ತಿದ್ದರೆ, ಅವರ ಸ್ಯಾಲರಿ, ಕ್ರೆಡಿಟ್ ಸ್ಕೋರ್ ಜಾಸ್ತಿ ಇದ್ದರೂ ರಿಜೆಕ್ಟ್ ಮಾಡಲಾಗುತ್ತದೆ.
• ಒಬ್ಬ ವ್ಯಾಪಾರಿಯು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೂ, ಅವರಿಗೆ ನಿಯಮಿತವಾದ ಆದಾಯ ಇರದಿದ್ದರೆ ಅಥವಾ ಬಿಸಿನೆಸ್ ನಷ್ಟದಲ್ಲಿ ನಡೆಯುತ್ತಿದ್ದರೆ, ವಹಿವಾಟು ಕಡಿಮೆ ಇದ್ದರೂ ಸಾಲದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
• ಖಾಸಗಿ ಕಂಪನಿಯ ಉದ್ಯೋಗಿಯು ಸರಾಸರಿ ಕ್ರೆಡಿಟ್ ಸ್ಕೋರ್ ಹೊಂದಿದ್ದು, ಆತನ ಸಂಬಳ ಕಡಿಮೆ ಇದ್ದರೆ, ಅಗತ್ಯಕ್ಕಿಂತ ಹೆಚ್ಚಿನ ಮೊತ್ತದ ಸಾಲಕ್ಕೆ ಅರ್ಜಿ ಹಾಕಿದ್ದರೆ, ಅಂತಹ ಸಂದರ್ಭಗಳಲ್ಲಿ ಬ್ಯಾಂಕ್ ಗಳು ಸಾಲ ನೀಡಲು ಒಪ್ಪುವುದಿಲ್ಲ.
• ಯಾವುದೇ ವ್ಯಕ್ತಿಯು ಕ್ರೆಡಿಟ್ ಸ್ಕೋರ್ ಮೇಂಟೇನ್ ಮಾಡಿರುತ್ತಾರೆ ನಿಜ. ಆದರೆ, ಈಗಾಗಲೇ ಸಾಲ ಮಾಡಿ, ಅದರ ಇಎಂಐ ಕಟ್ಟುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಬ್ಯಾಂಕುಗಳು ಯಾವುದೇ ಕಾರಣಕ್ಕೂ ಸಾಲ ನೀಡುವುದಿಲ್ಲ.
• ಒಬ್ಬ ಉದ್ಯೋಗಿಯು 700ಕ್ಕೂ ಅಧಿಕ ಕ್ರೆಡಿಟ್ ಸ್ಕೋರ್ ಹೊಂದಿದ್ದು, ಕಂಪನಿಯಲ್ಲಿ ಒಂದು ವರ್ಷದ ಗುತ್ತಿಗೆಗೆ ಮಾತ್ರ ನೇಮಕಗೊಂಡಿರುತ್ತಾರೆ. ಸಾಲದ ಅವಧಿಯು 4-5 ವರ್ಷ ಇದ್ದರೆ, ಆತನಿಗೆ ಮತ್ತೆ ಕೆಲಸ ಸಿಗದಿರುವ ಸಾಧ್ಯತೆ ಇರುವುದರಿಂದ ಅವರ ಸಾಲದ ಅರ್ಜಿಯನ್ನು ತಿರಸ್ಕರಿಸುತ್ತವೆ.
ಇದನ್ನೂ ಓದಿ : ಬಿಗ್‌ಬಾಸ್ ಮನೆಯಿಂದ ಮಾತಿನ ಮಲ್ಲಿ ಮಲ್ಲಮ್ಮ ಔಟ್


















