ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಬಳಿ ಇಂದು ಭಾವುಕ ಕ್ಷಣಗಳು ಎದುರಾಗಿವೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಗಣ್ಯರ ದಂಡೇ ಹರಿದುಬಂದಿದೆ.
ಅಪ್ಪು ಸಮಾಧಿ ದರ್ಶನ ಪಡೆದ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ಮಗಳು ಧೃತಿ ಕಣ್ಣೀರು ಹಾಕಿದ್ದಾರೆ. ಇತ್ತ ನಟ ಯುವರಾಜ್ ಕುಮಾರ್, ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಇಡೀ ದೊಡ್ಮನೆ ಕುಟುಂಬವೇ ಪುಣ್ಯಭೂಮಿಗೆ ಆಗಮಿಸಿದೆ. ಸಮಾಧಿ ಸನ್ನಿಧಿಯಲ್ಲಿ ಅಪ್ಪುಗೆ ಇಷ್ಟವಾಗುವ ವಿವಿಧ ಖಾದ್ಯಗಳನ್ನು ಇಟ್ಟು ಸಕಲ ವಿಧಿವಿಧಾನಗಳೊಂದಿಗೆ ಭಕ್ತಿಪೂರ್ವಕ ಪೂಜೆ ಸಲ್ಲಿಸಲಾಗುತ್ತಿದೆ. ನೆಚ್ಚಿನ ನಟನ ನೆನೆದು ಅಭಿಮಾನಿ ಸಾಗರವೇ ತೀವ್ರ ಭಾವುಕಗೊಂಡಿದೆ.


















