ಹಾಸನ: ದಸರಾ ಉದ್ಘಾಟನೆ ಮಾಡಲು ಹೋಗುವವರಿಗೆ ನೀವು ಕುಂಕುಮ ಬಳೆ ಹಾಕಿಕೊಂಡೆ ಹೋಗಬೇಕು ಎಂದು ನಾನು ಹೇಳಲು ಆಗುವುದಿಲ್ಲ. ಅದು ಅವರವರಿಗೆ ಬಿಟ್ಟ ಸಂಪ್ರದಾಯ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದ್ದಾರೆ.
ಬಾನು ಮುಷ್ಕಾಕ್ ಕುಂಕುಮ ಹೂಬಳೆ ತೊಟ್ಟು ದಸರಾ ಉದ್ಘಾಟನೆಯಲ್ಲಿ ಭಾಗಿಯಾಗಲಿ ಎಂದು ಪ್ರತಾಪ್ ಸಿಂಹ ಹೇಳಿಕೆಯ ಕುರಿತು ಹಾಸನದಲ್ಲಿ ಮಾತನಾಡಿದ ನಾರಾಯಣಗೌಡ, ಯಾವುದೇ ಧರ್ಮದವರು ಮತ್ತೊಂದು ಧರ್ಮದವರನ್ನು ಗೌರವಿಸಿ ಅರ್ಥ ಮಾಡಿಕೊಂಡಾಗ, ಆಗ ಅವರಿಗೆ ಗೌರವ ಹೆಚ್ಚುತದೆ ಎನ್ನುವುದು ನನ್ನ ಭವಾನೆ ಎಂದಿದ್ದಾರೆ.
ಸುಮ್ಮನೆ ಬಾಯಿಗೆ ಬಂದ ಹಾಗೆ ಹೇಳಿಕೆ ಕೊಡುವುದನ್ನು ಬಿಟ್ಟು ದಸರಾ ಹಿಂದೂಗಳ ಆರಾಧನೆ, ಹಿಂದೂಗಳು ನಡೆಸಿಕೊಂಡು ಬಂದ ಸಂಪ್ರದಾಯವಾಗಿದೆ. ಹಾಗಾಗಿ ಅದರ ಮುಖಾಂತರವೇ ಈ ವರ್ಷದ ದಸರಾವೂ ನಡೆಯುತ್ತದೆ ಎಂದು ನಾನು ತಿಳಿದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ದಸರಾ ಉದ್ಘಾಟನೆ ಮಾಡಲು ಅಭ್ಯಂತರ ಇಲ್ಲ ಆದರೆ, ಇಲ್ಲಿವರೆಗೂ ಒಂದು ಧರ್ಮದ ಸಂಪ್ರದಾಯದ ಮುಖಾಂತರ ದಸರಾವನ್ನು ಮುನ್ನಡೆಸಿಕೊಂಡು ಬಂದಿದೆ. ಅದೇ ಸಂಪ್ರದಾಯದ ಪ್ರಕಾರವೇ ದಸರಾ ಉದ್ಘಾಟನೆ ಆಗಬೇಕೆ ಹೋರತು,ನಿಮ್ಮ ರಾಜಕೀಯ ತೆವಲಿಗಾಗಿ, ನಿಮ್ಮ ಸ್ವಂತ ಆಲೋಚನೆಗಳಿಗಾಗಿ ನಾನು ಹೀಗೆ ದಸರಾ ಉದ್ಘಾಟನೆ ಮಾಡುತ್ತೇನೆ, ಹೀಗೆ ನಡೆದುಕೊಳ್ಳುತ್ತೇನೆ ಎನ್ನುವುದು ಸರಿ ಅಲ್ಲಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡ ಭುವನೇಶ್ವರಿ ಬಗ್ಗೆ ಮತ್ನಾಡುವಾಗ ಅವರು ಲಘುವಾಗಿ ಮಾತನಾಡಿದ್ದಾರೆ. ಭುವನೇಶ್ವರಿ ಅರಿಶಿನ ಕುಂಕುಮವನ್ನು ಹಚ್ಚಿಬಿಟ್ಟು ದೇವರು ಮಾಡಿ ಕೂರಿಸಿ ಬಿಟ್ಟರೆ ನಾವೇನು ಮಾಡಬೇಕು ಎನ್ನುವ ಪ್ರಶ್ನೆ ಮಾಡಿದ್ದಾರೆ. ಭುವನೇಶ್ವರಿಯನ್ನು ಎಲ್ಲಾ ಧರ್ಮಿಯರು ಆರಾಧಿಸಿತ್ತಾರೆ. ಅದು ಅವರಿಗೆ ಚೆನ್ನಾಗಿ ಗೊತ್ತಿರಬೇಕು. ಭುವನೇಶ್ವರಿ ಈಗ ಹುಟ್ಟಿದಲ್ಲ, ಅವರು ಹುಟ್ಟುವುದಕ್ಕಿಂತ ಮುಂಚೆಯೇ ಹುಟ್ಟಿತ್ತು. ಅಂದಿನ ಆ ಬನವಾಸಿ ರಾಜಮನೆತನದವರು ಭುವನೇಶ್ವರಿಯನ್ನು ಆರಾಧಿಸಿಕೊಂಡು ಬಂದಿದ್ದಾರೆ. ಇಂದು ಭುವನೇಶ್ವರಿ ಬಗ್ಗೆ ಮಾತನಾಡಿದ ಹಾಗೆ, ನಾಳೆ ಚಾಮುಂಡೇಶ್ವರಿ ದೇವಿ ಬಗ್ಗೆ ಮಾತನಾಡುವುದಿಲ್ಲ ಎಂದು ಏನು ಗ್ಯಾರಂಟಿ? ಎಂದು ಪ್ರಶ್ನೆ ಮಾಡಿದ್ದಾರೆ.
ಭುವನೇಶ್ವರಿಯ ಬಗ್ಗೆ ಮಾತನಾಡುವವರಿಗೆ, ಭುವನೇಶ್ವರಿಯನ್ನು ಒಂದು ಧರ್ಮದ ಹಿನ್ನಲೆಯಲ್ಲಿ ನೋಡುವವರಿಗೆ ಚಾಮುಂಡಿ ದಸರಾ ಪ್ರಮುಖ್ಯ ನೀಡಲಾಗಿದೆ. ಮೈಸೂರು ಮಹಾರಾಜರ ದಸರಾ ಕಾರ್ಯಕ್ರಮದ ಆರಾಧ್ಯ ದೇವತೆ ಚಾಮುಂಡಿಯನ್ನು ನೀವು ಯಾಕೆ ಒಪ್ಪಿಕೊಳ್ಳುತ್ತೀರಾ? ಚಾಮುಂಡಿ, ಭುವನೇಶ್ವರಿಯನ್ನು ಒಪ್ಪಿಕೊಳ್ಳುವುದಿಲ್ಲಾ ಎಂದರೆ ಮತ್ತೆ ದಸರಾ ಹೇಗೆ ಉದ್ಘಾಟನೆ ಮಾಡುತ್ತೀರಾ ? ಎನ್ನುವುದೆ ಎಲ್ಲರ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.
ನೀವು ದಸರಾ ಉದ್ಘಾಟನೆ ಮಾಡುವುದರಲ್ಲಿ ನಮ್ಮ ಭಿನ್ನಾಭಿಪ್ರಾಯ ಇಲ್ಲ, ಆದರೆಕೆಲ ನಿಮ್ಮ ಕೆಲವು ಹೇಳಿಕೆಗಳು ಕನ್ನಡಿಗರಿಗೆ ಮಾಡಿದ ಅಪಮಾನ ಎಂದು ನನಗೆ ಅನಿಸುತ್ತಿದೆ. ಅಂತಹ ಹೇಳಿಕೆಗಳಿಂದ ದೂರ ಉಳಿದು ದಸರಾ ಉದ್ಘಾಟನೆ ಮಾಡಿದರೆ ತಪ್ಪಿಲ್ಲ. ಏಳುವರೆ ಕೋಟಿ ಕನ್ನಡಿಗರ ತೀರ್ಮಾನವನ್ನು ಯಾರೋ ಒಬ್ಬರು ಹೋಲಿಕೆ ಮಾಡುವುದು ನನಗೆ ಇಷ್ಟವಿಲ್ಲ, ಎಂದಿದ್ದಾರೆ.


















