ಬೆಂಗಳೂರು : ಧರ್ಮಸ್ಥಳ ತಲೆಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸ್ಪಷ್ಟನೆ ನೀಡುತ್ತೇನೆ ಎಂದು ಯೂಟ್ಯೂಬರ್ ಸಮೀರ್ ಎಂ.ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಎಸ್‌ಐಟಿ ನೋಟಿಸ್ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮೀರ್, ನನಗೆ ಈವರೆಗೂ ಎಸ್‌ಐಟಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ನನಗೆ ಬೆಳ್ತಂಗಡಿ ಠಾಣಾ ಪೊಲೀಸರಿಂದ ನೋಟಿಸ್ ಬಂದಿತ್ತು. ಅದಕ್ಕಾಗಿ ಮೂರು ದಿನ ಬೆಳ್ತಂಗಡಿ ಠಾಣೆಗೆ ವಿಚಾರಣೆಗಾಗಿ ಹೋಗಿದ್ದೆ. ಅದು ಮುಗಿದಿದೆ. ಈ ಎಲ್ಲ ವಿಷಯವಾಗಿ ಶೀಘ್ರದಲ್ಲೇ ಸ್ಪಷ್ಟನೆ ಕೊಡುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನು, ವಿದೇಶದಿಂದ ಫಂಡಿಂಗ್ ಮಾಡಿದ್ದಾರೆ ಎಂಬ ವಿಚಾರವಾಗಿ ಮಾತನಾಡಿ, ನಾನು ಆ ವಿಚಾರವಾಗಿ ಮಾತನಾಡುವುದಿಲ್ಲ. ಪೊಲೀಸರ ತನಿಖೆ ನಡೆಯುತ್ತಿದೆ. ಬಳಿಕ ಸತ್ಯ ಹೊರಗಡೆ ಬರುತ್ತದೆ. ಆರೋಪಗಳಿಗೆಲ್ಲಾ ಉತ್ತರ ಕೊಟ್ಟುಕೊಂಡು ಕೂರುವುದಕ್ಕೆ ಆಗಲ್ಲ. ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಅವರೇ ಎಲ್ಲವನ್ನೂ ಬಹಿರಂಗ ಮಾಡುತ್ತಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಅನನ್ಯಾ ಭಟ್ ವಿಚಾರವಾಗಿ ಮಾತನಾಡಿ, ನಾನು ನನ್ನ ಯೂಟ್ಯೂಬ್ ಚಾನೆಲ್ ಮೂಲಕ ಎಲ್ಲ ವಿಷಯಗಳಿಗೂ ಸ್ಪಷ್ಟನೆ ಕೊಡುತ್ತೇನೆ ಎಂದಿದ್ದಾರೆ.



















