ಕಾಂಗ್ರೆಸ್ ನಲ್ಲಿ ಸ್ಫೋಟಿಸಿರುವ ಅಸಮಾಧಾನದ ಜ್ವಾಲಾಮುಖಿಯನ್ನು ನಂದಿಸಲು ಬಂದಿರುವ ಸುರ್ಜೇವಾಲಾ ಶಾಸಕರ ಆರೋಪಗಳ ವರ್ಷಧಾರೆಗೆ ಕಂಗಾಲಾಗಿದ್ದಾರೆ.
ಅದರಲ್ಲೂ ನಿನ್ನೆ ನಡೆದ ಶಾಸಕರೊಟ್ಟಿಗಿನ ಮಾತುಕತೆ ವೇಳೆ ಬಹುತೇಕರು, ತಮ್ಮ ಜಿಲ್ಲಾ ಉಸ್ತುವಾರಿಗಳ ವಿರುದ್ಧ ಕೆಂಡಕಾರಿದ್ದು ಬೆಳೆಕಿಗೆ ಬಂದಿದೆ. ಕಾಟಾಚಾರಕ್ಕೆ ಜಿಲ್ಲೆಗೆ ಬಂದು ಹೋಗುತ್ತಾರೆ. ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಅಷ್ಟೇ ಅಲ್ಲಾ ಯಾವ ಕೆಲಸಗಳನ್ನೂ ಮಾಡಿಕೊಡುತ್ತಿಲ್ಲ ಎಂದು ಬಹುತೇಕರು ದೂರಿದ್ದಾರೆ.
ಇದರ ನಡುವೆ ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಎರಡನೇ ಸುತ್ತಿನ ಶಾಸಕರೊಟ್ಟಿಗೆ ಸಮಾಲೋಚನೆ ನಡೆಯುತ್ತಿದೆ. ಈ ಪೈಕಿ ನಿನ್ನೆ ನಿಗದಿಯಂತೆ ಬೆಂಗಳೂರಿಗೆ ಬಾರದ ರಾಜು ಕಾಗೆ ಭೇಟಿ ಕುತೂಹಲ ಮೂಡಿಸಿದೆ. ಈಗಾಗಲೇ ರಾಜೀನಾಮೆ ಮಾತುಗಳನ್ನಾಡಿರುವ ಅವರನ್ನು ಹೈಕಮಾಂಡ್ ಹೇಗೆ ನಿಭಾಯಿಸುತ್ತೆ ಅನ್ನೋದು ಕುತೂಹಲ ಮೂಡಿಸಿದೆ. ಇದರ ನಡುವೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ, ಗೌರಿಬಿದನೂರಿನ ಪುಟ್ಟಸ್ವಾಮಿ ಗೌಡ ಸೇರಿ ಹಲವರಿಗೆ ಬುಲಾವ್ ನೀಡಲಾಗಿದೆ.



















