ಡಿಸಿಎಂ ಡಿ.ಕೆ ಶಿವಕುಮಾರ್ ನಟ್ಟು, ಬೋಲ್ಟ್ ಹೇಳಿಕೆಗೆ ನಟ ಸುದೀಪ್ ಬೇಸರ ವ್ಯಕ್ತಪಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಯಾವುದಕ್ಕೂ ಉತ್ತರ ಕೊಡಲು ಬಯಸುವುದಿಲ್ಲ. ಈ ವಿಷಯವಾಗಿ ನಾನು ಏನೂ ಮಾತನಾಡುವುದು ಬೇಡ. ಫಿಲಂ ಚೇಂಬರ್ ಗೆ ಹೋಗಿ ಹಿಸ್ಟರಿ ತೆಗೆದು ನೋಡಿ. ಫಿಲ್ಮ್ ಚೇಂಬರ್ ನಾನು ಏನು ಮಾಡಿದ್ದೇನೆ ಹೋಗಿ ನೋಡಿ. ಎಲ್ಲರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ ಎಂದು ನಟ ಸುದೀಪ್ಗೆ ಡಿಸಿಎಂ ಟಾಂಗ್ ನೀಡಿದ್ದಾರೆ.