ಸರ್ಕಾರಿ ಕಚೇರಿಯಲ್ಲಿ ಗೃಹ ರಕ್ಷಕ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಮೋಜು ಮಸ್ತಿ ಮಾಡಿರುವ ಆರೋಪ ಮಂಡ್ಯದ ಪಾಂಡವಪುರದಲ್ಲಿ ಕೇಳಿ ಬಂದಿದೆ. ತರಬೇತಿಯ ಹೆಸರಲ್ಲಿ ಅಧಿಕಾರಿ ಸಿಬ್ಬಂದಿಗಳ ಜೊತೆ ಕಚೇರಿಯನ್ನೇ ಬಾರ್ ಮಾಡಿಕೊಂಡು ಗುಂಡು ತುಂಡಿನ ಪಾರ್ಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪಾರ್ಟಿಯಲ್ಲಿ ಡಿ.ಜೆ ಹಾಕಿಕೊಂಡು ಮಹಿಳಾ ಸಿಬ್ಬಂದಿಗೆ ಮದ್ಯ ಕುಡಿಸಿ ಅವರ ಜೊತೆ ಅಸಭ್ಯ ನೃತ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಗೃಹರಕ್ಷಕ ದಳ ಸಿಬ್ಬಂದಿಗಳ ಮೋಜು ಮಸ್ತಿಯ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಈ ಕುರಿತು ಸಾಮಾಜಿಕ ಹೋರಾಟಗಾರ ವಿಶ್ವ ದಲಿತ ಮಹಾಸಭಾ ಅಧ್ಯಕ್ಷ ಪೂರ್ಣಚಂದ್ರ ಗೃಹ ಹರಕ್ಷಕ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ದ ಡಿಸಿ, ಎಸ್ಪಿಗೆ ದೂರು ನೀಡಿದ್ದಾರೆ.
ಅಧಿಕಾರ ದುರ್ಬಳಕೆ, ಸರ್ಕಾರಿ ಕಚೇರಿಯಲ್ಲಿ ಪಾರ್ಟಿ ಮಾಡಿದರ ವಿರುದ್ದ ಕ್ರಮಕ್ಕೆ ಆಗ್ರಹಿಸಲಾಗಿದೆ. ಸರ್ಕಾರಿ ವಾಹನವನ್ನು ಮೋಜಿ ಮಸ್ತಿಗೆ ಬಳಸಿಕೊಂಡು ಮಹಿಳಾ ಸಿಬ್ಬಂದಿಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಬೆದರಿಕೆ ಮಾಡುತ್ತಿರುವವರ ವಿರುದ್ಧ ಕ್ರಮ ಆಗಬೇಕು ಎಂದಿದ್ದಾರೆ.