ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

Deportation: 5.30 ಲಕ್ಷ ವಲಸಿಗರ ಮಾನವೀಯ ಪೆರೋಲ್ ರದ್ದು: ಸಾಮೂಹಿಕ ಗಡೀಪಾರಿಗೆ ಟ್ರಂಪ್ ಸಿದ್ಧತೆ

March 22, 2025
Share on WhatsappShare on FacebookShare on Twitter

ವಾಷಿಂಗ್ಟನ್: ಅಕ್ರಮ ವಲಸಿಗರ ವಿರುದ್ಧದ ಕ್ರಮವನ್ನು ಮುಂದುವರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಲಕ್ಷಾಂತರ ಕ್ಯೂಬನ್ನರು, ಹೈಟಿಯನ್ನರು, ನಿಕರಾಗುವನ್ನರು ಮತ್ತು ವೆನಿಜುವೆಲಾ ಜನರಿಗೆ ಇದ್ದ ಕಾನೂನು ರಕ್ಷಣೆಯನ್ನು ವಾಪಸ್ ಪಡೆದುಕೊಳ್ಳುತ್ತಿರುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಸುಮಾರು 5.30 ಲಕ್ಷ ವಲಸಿಗರನ್ನು ಒಂದು ತಿಂಗಳಲ್ಲಿ ಗಡೀಪಾರು(Deportation) ಮಾಡುವ ಸುಳಿವು ನೀಡಿದ್ದಾರೆ.

ಟ್ರಂಪ್ ಅವರ ಈ ಆದೇಶವು ಅಕ್ಟೋಬರ್ 2022 ರಿಂದ ಅಮೆರಿಕಕ್ಕೆ ಬಂದಿರುವ ಈ ನಾಲ್ಕು ದೇಶಗಳ ಸುಮಾರು 5,32,000 ಜನರಿಗೆ ಅನ್ವಯಿಸುತ್ತದೆ. ಇವರೆಲ್ಲರೂ ಫಿನಾನ್ಶಿಯಲ್ ಸ್ಪಾನ್ಸರ್(ಆರ್ಥಿಕ ಪ್ರಾಯೋಜಕರು)ಗಳ ಮೂಲಕ ಅಮೆರಿಕಕ್ಕೆ ಬಂದಿದ್ದು, ಅಮೆರಿಕದಲ್ಲಿ 2 ವರ್ಷಗಳ ಕಾಲ ನೆಲೆಸಲು ಮತ್ತು ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈಗ ಫೆಡರಲ್ ರಿಜಿಸ್ಟರ್ ನಲ್ಲಿ ನೋಟಿಸ್ ಪ್ರಕಟವಾದ 30 ದಿನಗಳ ನಂತರ ಅಥವಾ ಏಪ್ರಿಲ್ 24ರೊಳಗಾಗಿ ಇವರೆಲ್ಲರೂ ತಮ್ಮ ಕಾನೂನು ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ ಎಂದು ಗೃಹ ಭದ್ರತೆ ಸಚಿವರಾದ ಕ್ರಿಸ್ಟಿ ನೋಮ್ ಹೇಳಿದ್ದಾರೆ.

ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ಅಡಿಯಲ್ಲಿ ಸಿಎಚ್ಎನ್‌ವಿ ಎಂದು ಕರೆಯಲ್ಪಡುವ ಎರಡು ವರ್ಷಗಳ “ಪೆರೋಲ್” ಕಾರ್ಯಕ್ರಮವನ್ನು ಪರಿಚಯಿಸಲಾಗಿತ್ತು. ಇದು ವಲಸಿಗರಿಗೆ ಅಮೆರಿಕದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಕೆಲಸದ ಪರವಾನಗಿಗಳನ್ನು ಪಡೆಯಲು ಅನುವು ಮಾಡಿಕೊಟ್ಟಿತ್ತು. ಈಗ ಇದನ್ನು ಸರ್ಕಾರ ಕಡಿತಗೊಳಿಸುತ್ತಿದೆ. ಯುದ್ಧ ಅಥವಾ ರಾಜಕೀಯ ಅಸ್ಥಿರತೆ ಇರುವ ದೇಶಗಳ ಜನರಿಗೆ ಅಮೆರಿಕ ಪ್ರವೇಶಿಸಲು ಮತ್ತು ತಾತ್ಕಾಲಿಕವಾಗಿ ವಾಸಿಸಲು ಅವಕಾಶ ನೀಡಲೆಂದು ಬೈಡೆನ್ ಅವರು ಈ ಮಾನವೀಯ ಪೆರೋಲ್ ವ್ಯವಸ್ಥೆ ಜಾರಿ ಮಾಡಿದ್ದರು. ಆದರೆ, ಇದು “ವ್ಯಾಪಕವಾಗಿ ದುರುಪಯೋಗ” ಆಗುತ್ತಿದೆ ಎಂದು ಆರೋಪಿಸಿರುವ ಟ್ರಂಪ್, ಅದನ್ನು ಕೊನೆಗೊಳಿಸುವುದಾಗಿ ಘೋಷಿಸಿದ್ದಾರೆ.

ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲೇ ಟ್ರಂಪ್ ಅವರು ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಲಕ್ಷಾಂತರ ಜನರನ್ನು ಗಡೀಪಾರು ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಜೊತೆಗೆ ವಲಸಿಗರಿಗೆ ಅಮೆರಿಕ ಪ್ರವೇಶಕ್ಕೆ ಮತ್ತು ವಾಸಕ್ಕೆ ಇದ್ದ ಕಾನೂನು ಮಾರ್ಗಗಳನ್ನೂ ಮುಚ್ಚುವುದಾಗಿ ತಿಳಿಸಿದ್ದರು.

ಏನಿದು ‘ಮಾನವೀಯ ಪೆರೋಲ್’ ಕಾರ್ಯಕ್ರಮ?
ಈವರೆಗೆ ಮಾನವೀಯ ಆಧಾರದಲ್ಲಿ ನೀಡಲಾಗುತ್ತಿದ್ದ ಪೆರೋಲ್ ಯೋಜನೆಯ ಫಲಾನುಭವಿಗಳು ತಮ್ಮ ಪೆರೋಲ್ ಅವಧಿ ಮುಗಿಯುವವರೆಗೆ ಅಮೆರಿಕದಲ್ಲಿ ಉಳಿಯಲು ಅವಕಾಶವಿತ್ತು. ಆದರೆ ಆಶ್ರಯ ಕೋರಿ, ವೀಸಾಗಳಿಗಾಗಿ ಮತ್ತು ಇತರೆ ಕೋರಿಕೆಗಳನ್ನು ಸಲ್ಲಿಸಿ ಅವರು ಸಲ್ಲಿಸುತ್ತಿದ್ದ ಅರ್ಜಿಗಳ ಪರಿಶೀಲನೆಯನ್ನು ಅಮೆರಿಕದ ಹೊಸ ಸರ್ಕಾರ ಈಗಾಗಲೇ ಸ್ಥಗಿತಗೊಳಿಸಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಈಗಾಗಲೇ ಹಲವರು ನ್ಯಾಯಾಲಯಗಳ ಮೊರೆ ಹೋಗಿದ್ದಾರೆ. ಅಮೆರಿಕದ ನಾಗರಿಕರು ಮತ್ತು ವಲಸಿಗರ ಸಂಘಟನೆಗಳು ಮಾನವೀಯ ಪೆರೋಲ್ ಅನ್ನು ಕೊನೆಗೊಳಿಸಿದ್ದಕ್ಕಾಗಿ ಟ್ರಂಪ್ ಆಡಳಿತದ ವಿರುದ್ಧ ಮೊಕದ್ದಮೆ ಹೂಡಿವೆ.

ಬೈಡನ್ ಆಡಳಿತವು ಈ ನಾಲ್ಕು ದೇಶಗಳಿಂದ ಪ್ರತಿ ತಿಂಗಳು ಉದ್ಯೋಗ ಅರ್ಹತೆ ಹೊಂದಿರುವ 30,000 ಜನರಿಗೆ 2 ವರ್ಷಗಳವರೆಗೆ ಅಮೆರಿಕಕ್ಕೆ ಬರಲು ಅವಕಾಶ ನೀಡಿತ್ತು. ಅಕ್ರಮವಾಗಿ ಗಡಿ ದಾಟುವುದನ್ನು ತಡೆಯುವ ಮತ್ತು ಹೊಸ ಕಾನೂನು ಮಾರ್ಗಗಳ ಮೂಲಕ ಅಮೆರಿಕ ಪ್ರವೇಶಿಸಲು ಜನರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೈಡೆನ್ ಆಡಳಿತವು ಸಿಎಚ್‍ಎನ್‌ವಿ ಯೋಜನೆಯನ್ನು ಜಾರಿ ಮಾಡಿತ್ತು.

ಹೊಸ ನೀತಿ ಏನು ಹೇಳುತ್ತದೆ?
ಟ್ರಂಪ್ ಸರ್ಕಾರದ ಅಡಿಯಲ್ಲಿ ರೂಪಿಸಲಾದ ಹೊಸ ನೀತಿಯ ಪ್ರಕಾರ, ಈ ರೀತಿಯಾಗಿ ದೇಶಕ್ಕೆ ಬಂದವರು ಪೆರೋಲ್ ಅವಧಿ ಮುಕ್ತಾಯದ ದಿನಾಂಕದ ಮೊದಲೇ ದೇಶದಿಂದ ನಿರ್ಗಮಿಸಬೇಕು. “ಈ ಪೆರೋಲ್ ತಾತ್ಕಾಲಿಕವಾಗಿದ್ದು, ಇದನ್ನು ಆಧಾರವಾಗಿಟ್ಟುಕೊಂಡು ಯಾವುದೇ ವಲಸೆ ಸ್ಥಾನಮಾನವನ್ನು ಯಾರೂ ಕೋರುವಂತಿಲ್ಲ” ಎಂದು ಸರ್ಕಾರ ಹೇಳಿದೆ.

ಟ್ರಂಪ್ ಸರ್ಕಾರದ ಈ ನಿರ್ಧಾರದ ವಿರುದ್ಧ ಮೊಕದ್ದಮೆ ಹೂಡಿರುವ ಸಂಸ್ಥೆಗಳಲ್ಲಿ ಒಂದಾದ ಜಸ್ಟೀಸ್ ಆಕ್ಷನ್ ಸೆಂಟರ್‌ನ ಸ್ಥಾಪಕಿ ಮತ್ತು ನಿರ್ದೇಶಕಿ ಕರೆನ್ ತುಮ್ಲಿನ್, ಈ ಕ್ರಮವನ್ನು “ನಿರ್ಲಕ್ಷ್ಯ, ಕ್ರೂರ ಮತ್ತು ಪ್ರತಿಕೂಲ ಪರಿಣಾಮ ಬೀರುವಂಥ ನಿರ್ಧಾರ” ಎಂದು ಕರೆದಿದ್ದಾರೆ. ಇದು “ದೇಶಾದ್ಯಂತ ಹಲವು ಕುಟುಂಬಗಳು ಮತ್ತು ಸಮುದಾಯಗಳಲ್ಲಿ ಅನಗತ್ಯ ಗೊಂದಲ ಹಾಗೂ ಆತಂಕವನ್ನು ಸೃಷ್ಟಿ ಮಾಡಲಿದೆ” ಎಂದೂ ಅಭಿಪ್ರಾಯಪಟ್ಟಿದ್ದಾರೆ.

ರಷ್ಯಾ ಯುದ್ಧದ ಸಂದರ್ಭದಲ್ಲಿ ಅಮೆರಿಕಕ್ಕೆ ಪಲಾಯನ ಮಾಡಿರುವ ಸುಮಾರು 2,40,000 ಉಕ್ರೇನ್ ಪ್ರಜೆಗಳ ಪೆರೋಲ್ ಸ್ಥಾನಮಾನವನ್ನು ತೆಗೆದುಹಾಕುವುದಾಗಿ ಟ್ರಂಪ್ ಇತ್ತೀಚೆಗೆ ಘೋಷಿಸಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಬೈಡೆನ್ ಸರ್ಕಾರವು ಮಾನವೀಯತೆಯ ಆಧಾರದಲ್ಲಿ ಹಲವು ಉಕ್ರೇನಿಯನ್ನರಿಗೆ ತನ್ನ ನೆಲದಲ್ಲಿ ಆಶ್ರಯ ನೀಡಿತ್ತು.

Tags: AmericaDeportationDonald trumpImmigrantsPolitician
SendShareTweet
Previous Post

ಶವಸಂಸ್ಕಾರ ಮಾಡಿದ 18 ತಿಂಗಳ ಬಳಿಕ ಧುತ್ತನೆ ಪ್ರತ್ಯಕ್ಷಳಾದ ಮಹಿಳೆ; ಇದೆಲ್ಲ ಹೇಗೆ ಸಾಧ್ಯ?

Next Post

Ladakh: ಲಡಾಖ್‌ನಲ್ಲಿ ಚೀನಾದಿಂದ 2 ಹೊಸ ಕೌಂಟಿ!: ಭಾರತ ಸರ್ಕಾರದ ಪ್ರತಿಕ್ರಿಯೆಯೇನು?

Related Posts

ಭೂಮಿಗೆ ಬರಲು ಸಜ್ಜಾಗಿದ್ದಾನೆ ಭಯಾನಕ ರಾಕ್ಷಸ!
ರಾಜ್ಯ

ಭೂಮಿಗೆ ಬರಲು ಸಜ್ಜಾಗಿದ್ದಾನೆ ಭಯಾನಕ ರಾಕ್ಷಸ!

ಸೌದಿ ಸೇನಾನೆಲೆಯ ಮೇಲೆ ಇರಾನ್ ದಾಳಿ: ಅಮೆರಿಕದ 5 ಇಂಧನ ವಿಮಾನಗಳಿಗೆ ಹಾನಿ, ಇರಾಕ್‌ನಲ್ಲಿ 6 ಯೋಧರ ಸಾವು
ವಿದೇಶ

ಸೌದಿ ಸೇನಾನೆಲೆಯ ಮೇಲೆ ಇರಾನ್ ದಾಳಿ: ಅಮೆರಿಕದ 5 ಇಂಧನ ವಿಮಾನಗಳಿಗೆ ಹಾನಿ, ಇರಾಕ್‌ನಲ್ಲಿ 6 ಯೋಧರ ಸಾವು

ವಿಚಿತ್ರ ವಾಸನೆ : ಅಮೆರಿಕದ 4 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ದಿಢೀರ್ ಹಾರಾಟ ಸ್ಥಗಿತ
ವಿದೇಶ

ವಿಚಿತ್ರ ವಾಸನೆ : ಅಮೆರಿಕದ 4 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ದಿಢೀರ್ ಹಾರಾಟ ಸ್ಥಗಿತ

ಮಿತ್ರ ಭಾರತಕ್ಕೆ ಇರಾನ್ ಸಹಾಯಹಸ್ತ : ಹೊರ್ಮುಜ್ ಜಲಸಂಧಿ ದಾಟಿದ ಭಾರತದ 2 ಎಲ್‌ಪಿಜಿ ಟ್ಯಾಂಕರ್‌ಗಳು
ದೇಶ

ಮಿತ್ರ ಭಾರತಕ್ಕೆ ಇರಾನ್ ಸಹಾಯಹಸ್ತ : ಹೊರ್ಮುಜ್ ಜಲಸಂಧಿ ದಾಟಿದ ಭಾರತದ 2 ಎಲ್‌ಪಿಜಿ ಟ್ಯಾಂಕರ್‌ಗಳು

ಇರಾನ್‌ನ ‘ಕ್ರೌನ್ ಜ್ಯುವೆಲ್’ ಖಾರ್ಗ್ ದ್ವೀಪದ ಮೇಲೆ ಅಮೆರಿಕದ ಭೀಕರ ದಾಳಿ : ಸೇನಾ ನೆಲೆಗಳು ಸಂಪೂರ್ಣ ಧ್ವಂಸ
ವಿದೇಶ

ಇರಾನ್‌ನ ‘ಕ್ರೌನ್ ಜ್ಯುವೆಲ್’ ಖಾರ್ಗ್ ದ್ವೀಪದ ಮೇಲೆ ಅಮೆರಿಕದ ಭೀಕರ ದಾಳಿ : ಸೇನಾ ನೆಲೆಗಳು ಸಂಪೂರ್ಣ ಧ್ವಂಸ

ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ತೈಲವಿದೆ? ಯುದ್ಧಕ್ಕೊಳಗಾದ ಇರಾನಿನ ಸ್ಥಾನ ಎಷ್ಟು?
ವಿದೇಶ

ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ತೈಲವಿದೆ? ಯುದ್ಧಕ್ಕೊಳಗಾದ ಇರಾನಿನ ಸ್ಥಾನ ಎಷ್ಟು?

Next Post
Ladakh: ಲಡಾಖ್‌ನಲ್ಲಿ ಚೀನಾದಿಂದ 2 ಹೊಸ ಕೌಂಟಿ!: ಭಾರತ ಸರ್ಕಾರದ ಪ್ರತಿಕ್ರಿಯೆಯೇನು?

Ladakh: ಲಡಾಖ್‌ನಲ್ಲಿ ಚೀನಾದಿಂದ 2 ಹೊಸ ಕೌಂಟಿ!: ಭಾರತ ಸರ್ಕಾರದ ಪ್ರತಿಕ್ರಿಯೆಯೇನು?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಎಲ್‌ಪಿಜಿ ಸಿಲಿಂಡರ್ ಎಮರ್ಜೆನ್ಸಿ : ಪ್ರಧಾನಿಗೆ ಪತ್ರ ಬರೆದ ಹೋಟೆಲ್ ಮಾಲಕಿ

ಎಲ್‌ಪಿಜಿ ಸಿಲಿಂಡರ್ ಎಮರ್ಜೆನ್ಸಿ : ಪ್ರಧಾನಿಗೆ ಪತ್ರ ಬರೆದ ಹೋಟೆಲ್ ಮಾಲಕಿ

ನೆಲಮಂಗಲದಲ್ಲಿ 6 ನವಿಲು ಸಾವು : ವಿಷ ಪ್ರಾಶನ ನೀಡಿರುವ ಶಂಕೆ

ನೆಲಮಂಗಲದಲ್ಲಿ 6 ನವಿಲು ಸಾವು : ವಿಷ ಪ್ರಾಶನ ನೀಡಿರುವ ಶಂಕೆ

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಅಕ್ರಮಗಳ ಆರೋಪ : ಹಣ ಕೊಟ್ಟರೆ ಎಲ್ಲ ಸಿಗುತ್ತೆ ಅಂತೆ.. ಆಡಿಯೋ ವೈರಲ್‌

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಅಕ್ರಮಗಳ ಆರೋಪ : ಹಣ ಕೊಟ್ಟರೆ ಎಲ್ಲ ಸಿಗುತ್ತೆ ಅಂತೆ.. ಆಡಿಯೋ ವೈರಲ್‌

ಜೈಲುಗಳಲ್ಲಿ ಡ್ರಗ್ಸ್‌ ನೆಟ್‌ವರ್ಕ್‌ಗೆ ಬ್ರೇಕ್‌ ಹಾಕಲು ಡಿಜಿಪಿ ಹೊಸ ಪ್ಲ್ಯಾನ್‌!

ಜೈಲುಗಳಲ್ಲಿ ಡ್ರಗ್ಸ್‌ ನೆಟ್‌ವರ್ಕ್‌ಗೆ ಬ್ರೇಕ್‌ ಹಾಕಲು ಡಿಜಿಪಿ ಹೊಸ ಪ್ಲ್ಯಾನ್‌!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಎಲ್‌ಪಿಜಿ ಸಿಲಿಂಡರ್ ಎಮರ್ಜೆನ್ಸಿ : ಪ್ರಧಾನಿಗೆ ಪತ್ರ ಬರೆದ ಹೋಟೆಲ್ ಮಾಲಕಿ

ಎಲ್‌ಪಿಜಿ ಸಿಲಿಂಡರ್ ಎಮರ್ಜೆನ್ಸಿ : ಪ್ರಧಾನಿಗೆ ಪತ್ರ ಬರೆದ ಹೋಟೆಲ್ ಮಾಲಕಿ

ನೆಲಮಂಗಲದಲ್ಲಿ 6 ನವಿಲು ಸಾವು : ವಿಷ ಪ್ರಾಶನ ನೀಡಿರುವ ಶಂಕೆ

ನೆಲಮಂಗಲದಲ್ಲಿ 6 ನವಿಲು ಸಾವು : ವಿಷ ಪ್ರಾಶನ ನೀಡಿರುವ ಶಂಕೆ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat