ಧಾರವಾಡ : ಜೈನ್ ಧರ್ಮದ ಪವಿತ್ರ ಣಮೋಕಾರ ಮಂತ್ರವು ಶಕ್ತಿಶಾಲಿಯಾದ ಸನಾತನ ಮಹಾಮಂತ್ರವಾಗಿದ್ದು, ಈ ಮಂತ್ರದ ಪಠಣೆಯಿಂದ ವಿಶ್ವತೋಮುಖವಾಗಿ ದೈವೀ ಪ್ರಭಾವಲಯ ಸೃಷ್ಟಿಯಾಗಿ ವಿಶ್ವಶಾಂತಿ ಸಾಧ್ಯವಾಗುತ್ತದೆ ಎಂದು ಜೈನ್ ಧರ್ಮದ ಪೂಜ್ಯ ಗಣಿನಿ ಆರಿಕಾ ರತ್ನ ಜಿನವಾಣಿ ಮಾತಾಜಿ ಹೇಳಿದರು.
ಅವರು ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀನೇಮಿನಾಥ ಜಿನಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವಿಶ್ವ ಣಮೋಕಾರ ಮಂತ್ರ ದಿನಾಚರಣೆ’ಯ ಪಾವನ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. ಣಮೋಕಾರ ಮಹಾಮಂತ್ರದ ಪಠಣೆಯಲ್ಲಿ ಸಮಸ್ತ ಶ್ರಾವಕ-ಶ್ರಾವಕಿಯರು ಭಕ್ತಿಯಿಂದ ಪಾಲ್ಗೊಳ್ಳಬೇಕೆಂದು ಜಿನವಾಣಿ ಮಾತಾಜಿ ಕರೆ ನೀಡಿದರು.
ವಿಶ್ವ ಣಮೋಕಾರ ಮಂತ್ರ ದಿನಾಚರಣೆ ಉದ್ಘಾಟಿಸಿದ ಕನ್ನಡ ನಿಯತಕಾಲಿಕದ ವಿಶ್ರಾಂತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ಎಲ್ಲಾ ಧರ್ಮಗಳ ಮಂತ್ರಗಳಲ್ಲಿ ಆಧ್ಯಾತ್ಮಿಕ ಶಕ್ತಿ ಸಂಚಯವಿರುತ್ತದೆ. ಎಲ್ಲ ಬೇಕು-ಬೇಡ, ದ್ವಂದ್ವ-ವೈರುಧ್ಯಗಳ ನೆಲೆಯಿಂದ ಹೊರಬಂದು ಮುಕ್ತ ಮನಸ್ಥಿತಿಯಲ್ಲಿ ಮಂತ್ರಪಠಣೆಗೆ ತೆರೆದುಕೊಂಡಾಗ ಅಲ್ಲಿ ಸಾಕ್ಷಾತ್ಕಾರದ ಬೆಳಗನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.
ಸಾಮೂಹಿಕ ಣಮೋಕಾರ ಮಂತ್ರದ ಪ್ರಾರ್ಥನೆಯಲ್ಲಿ ಜೈನ್ ಸಮಾಜದ ಮುಖಂಡ ಪಿ.ಎಸ್.ಪತ್ರಾವಳಿ, ಜೈನ್ ಟ್ರಸ್ಟ್ ಅಧ್ಯಕ್ಷ ಟಿ.ಎಂ.ದೇಸಾಯಿ, ಪಮ್ಮಣ್ಣ ಧಾರವಾಡ, ಮಹಾವೀರ ದೇಸಾಯಿ, ಬ್ರಹ್ಮಕುಮಾರ ದೇಸಾಯಿ, ನೇಮಿಚಂದ್ರ ನವಲೂರ, ಪದ್ಮರಾಜ ಪತ್ರಾವಳಿ, ಈಶ್ವರ ಗಡೇಕಾರ, ಪಾರ್ಶ್ವನಾಥ ದೇಸಾಯಿ, ದೇವೇಂದ್ರ ಬೊಬ್ಬಕ್ಕನವರ, ಮಂಜುನಾಥ ರಾಘೂನವರ, ಸಮ್ಮೇದ್ ಲೋಕೂರ, ಚಂದ್ರಕಾಂತ ನವಲೂರ, ಶಶಿಕಲಾ ದೇಸಾಯಿ, ರಾಜೇಶ್ವರಿ ಪತ್ರಾವಳಿ, ಸುಕನ್ಯಾ ಲೋಕೂರ, ವೀಣಾ ದೇಸಾಯಿ, ವಿಮಲಾ ನವಲೂರ, ಲತಾ ದೇಸಾಯಿ, ಸರೋಜಿನಿ ಜೈನ್, ಅಕ್ಷತಾ ದೇಸಾಯಿ ಪಾಲ್ಗೊಂಡಿದ್ದರು.
ಮಂಜುನಾಥ ಅಂಗಡಿ ಸ್ವಾಗತಿಸಿದರು. ಸುರೇಖಾ ಲೋಕೂರಬಾವಿ ನಿರೂಪಿಸಿದರು. ತವನಪ್ಪ ಲೋಕೂರ ವಂದಿಸಿದರು.



















