ಬೆಂಗಳೂರು: ಯರ್ರಾಬಿರ್ರಿ ಚಾಲನೆಗೆ ಬೇಸತ್ತ ಮಹಿಳೆಯು ತಮಿಳುನಾಡು ಸಾರಿಗೆ ಬಸ್ಸನ್ನು ಅಡ್ಡಗಟ್ಟಿ ಚಾಲಕನೊಂದಿಗೆ ಜಗಳವಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ, ಸಿಗ್ನಲ್ ಬಳಿ ಬಸ್ ಸ್ಕೂಟಿಗೆ ಟಚ್ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕೋಪಗೊಂಡ ಮಹಿಳೆ ಬಸ್ಸಿಗೆ ಅಡ್ಡಲಾಗಿ ಸ್ಕೂಟಿ ನಿಲ್ಲಿಸಿ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಇದನ್ನೂ ಓದಿ : ಲೈಂಗಿಕ ಕಿರುಕುಳದ ಸುಳ್ಳು ಆರೋಪ | ಕೇರಳದ ವ್ಯಕ್ತಿ ಆತ್ಮಹತ್ಯೆ ಬೆನ್ನಲ್ಲೇ ಮಹಿಳೆ ವಿರುದ್ಧ ಪ್ರಕರಣ ದಾಖಲು!



















